Select Your Language

Notifications

webdunia
webdunia
webdunia
webdunia

ಬಲೂನ್ ಮಾರೋ ಹುಡ್ಗಿ ರೇಪ್, ಮರ್ಡರ್ ಕೇಸ್ ಪಾಪಿ ಅರೆಸ್ಟ್: ಎನ್ ಕೌಂಟರ್ ಮಾಡಬೇಕಿತ್ತು ಎಂದ ಪಬ್ಲಿಕ್

Mysore rape and murder case

Krishnaveni K

ಮೈಸೂರು , ಶುಕ್ರವಾರ, 10 ಅಕ್ಟೋಬರ್ 2025 (10:13 IST)
Photo Credit: X
ಮೈಸೂರು: ಮೈಸೂರಿನಲ್ಲಿ ಬಲೂನ್ ಮಾರುವ 10 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪಾಪಿಯನ್ನು ಪೊಲೀಸರು ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪಬ್ಲಿಕ್ ಆತನನ್ನು ಎನ್ ಕೌಂಟರ್ ಮಾಡಬೇಕಿತ್ತು ಎಂದಿದ್ದಾರೆ.

ಮೈಸೂರಿನಲ್ಲಿ ಬಾಲಕಿ ಮೇಲೆ ರೇಪ್ ಮಾಡಿ ಕೊಲೆ ಮಾಡಿದ್ದ ಪಾಪಿ ಬಳಿಕ ಕೊಳ್ಳೇಗಾಲಕ್ಕೆ ಎಸ್ಕೇಪ್ ಆಗಿದ್ದ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಕೊಳ್ಳೇಗಾಲದಲ್ಲಿ ಆರೋಪಿಯನ್ನು ಬಂಧಿಸಿ ಮೈಸೂರಿಗೆ ಕರೆತಂದಿದ್ದಾರೆ.

ಆದರೆ ದಾರಿ ಮಧ್ಯೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದ್ದಾರೆ. ಬಳಿಕ ಆತನಿಗೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಈ ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಈ ಪಾಪಿಗೆ ಚಿಕಿತ್ಸೆ ಬೇರೆ ಕೇಡು. ಅಲ್ಲೇ ಎನ್ ಕೌಂಟರ್ ಮಾಡಿ ಬಿಸಾಕಬೇಕಿತ್ತು ಎಂದಿದ್ದಾರೆ.  ದಸರಾ ವೇಳೆ ಬಲೂನ್ ಮಾರಲು ಬಂದಿದ್ದ ಹಕ್ಕಿ ಪಿಕ್ಕಿ ಜನಾಂಗದ ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿ ನಿನ್ನೆ ರಾತ್ರಿ ಸುಮಾರು 2 ಗಂಟೆಗೆ ಆರೋಪಿ ಕೊಲೆಗೈದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದಿನಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ