ಬೆಂಗಳೂರು: ಸಾಮಾನ್ಯವಾಗಿ ನಾವು ತಿಳಿ ಹಳದಿ, ಮಣ್ಣಿನ ಬಣ್ಣದ ಜಿಂಕೆಯನ್ನು ನೋಡಿರುತ್ತೇವೆ. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿಳಿ ಬಣ್ಣದ ಜಿಂಕೆಯ ವಿಡಿಯೋ ವೈರಲ್ ಆಗಿದೆ.
ಥೇಟ್ ಮಾಮೂಲು ಜಿಂಕೆಯದ್ದೇ ಆಕಾರ. ಆದರೆ ಮೈ ಪೂರಾ ಬೆಣ್ಣೆಯಂತೆ ಬಿಳಿ. ಕಣ್ಣು ಪಿಂಕ್ ಆಗಿ ಕ್ಯೂಟ್ ಆಗಿರುವ ಜಿಂಕೆಯೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಉತ್ತರಪ್ರದೇಶದ ವನ್ಯಜೀವಿ ಅಭಯಾರಣ್ಯವೊಂದರಲ್ಲಿ ಇತರೆ ಜಿಂಕೆಗಳ ಜೊತೆ ಇರುವ ಇಂತಹದ್ದೇ ಬಿಳಿ ಬಣ್ಣದ ಜಿಂಕೆ ಪತ್ತೆಯಾಗಿತ್ತು. ಇದನ್ನು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಈಗ ಅಂತಹದ್ದೇ ಜಿಂಕೆಯ ವಿಡಿಯೋ ವೈರಲ್ ಆಗಿದೆ.