Daily Horoscope

Select Your Language

Notifications

webdunia
webdunia
webdunia
webdunia

ರೈಲು ಟ್ರ್ಯಾಕ್ ದಾಟುವ ಭರದಲ್ಲಿ ರೈಲಿನಡಿಗೆ ಸಿಲುಕಿ ನಜ್ಜುಗುಜ್ಜಾದ ಮಹಿಳೆಯರು: ಭೀಕರ video

Viral video train accident
Photo Credit: X
ರೈಲು ಟ್ರ್ಯಾಕ್ ದಾಟುವ ಭರದಲ್ಲಿ ರೈಲಿನಡಿಗೆ ಸಿಲುಕಿದ ಇಬ್ಬರು ಮಹಿಳೆಯರು ನಜ್ಜುಗುಜ್ಜಾದ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಬ್ಬರೂ ಮಹಿಳೆಯರೂ ನೋಡ ನೋಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ರೈಲು ಹಳಿ ದಾಟುವ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಜನ ಬುದ್ಧಿ ಕಲಿಯುವುದಿಲ್ಲ. ಇದೇ ರೀತಿ ರೈಲ್ವೇ ಸ್ಟೇಷನ್ ನಲ್ಲಿ ಹಲವು ಬಾರಿ ಅವಘಡಗಳಾಗುವುದು ಇದೆ.

ಇಲ್ಲೂ ಇದೇ ರೀತಿ ಆಗಿದೆ. ರೈಲ್ವೇ ನಿಲ್ದಾಣವೊಂದರಲ್ಲಿ ಇಬ್ಬರು ಮಹಿಳೆಯರು ಕೈ ಕೈ ಹಿಡಿದುಕೊಂಡು ರೈಲು ಹಳಿ ದಾಟಲು ಮುಂದಾಗುತ್ತಾರೆ. ಆದರೆ ಈ ವೇಳೆ ಇಬ್ಬರಿಗೂ ಬೇಗನೇ ಹಳಿ ಗೋಡೆ ದಾಟಿ ಮೇಲೆ ಹತ್ತಲು ಸಾಧ್ಯವಾಗುವುದಿಲ್ಲ.

ಅಷ್ಟರಲ್ಲಿ ವೇಗವಾಗಿ ಬರುವ ಎಕ್ಸ್ ಪ್ರೆಸ್ ರೈಲು ಕಬ್ಬಿನ ಜಲ್ಲೆಯಂತೆ ಇಬ್ಬರನ್ನೂ ನಜ್ಜುಗುಜ್ಜಾಗಿಸುತ್ತದೆ. ರೈಲಿನ ವೇಗದ ರಭಸಕ್ಕೆ ಇಬ್ಬರ ಮೃತದೇಹಗಳೂ ಎಷ್ಟೋ ದೂರದವರೆಗೆ ಎಳೆಯಲ್ಪಡುತ್ತದೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.


pic.twitter.com/z9ajQHMSuH

 

— 3. Dünya Savaşı (@ww3mediaa) May 5, 2026

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಲದಲ್ಲಿ ಸೋತ ಬಳಿಕ ದೊಡ್ಡ ನಿರ್ಧಾರಕ್ಕೆ ಮುಂದಾದ ಮಮತಾ ಬ್ಯಾನರ್ಜಿ