Select Your Language

Notifications

webdunia
webdunia
webdunia
webdunia

ಬಾಲ್ಕನಿಯಲ್ಲಿ ರಿಲ್ಯಾಕ್ಸ್ ಆಗಲು ಬಾಗಿದವನಿಗೆ ಇದೆಂಥಾ ದುರಂತ ಅಂತ್ಯ: ಭಯಾನಕ Video

Viral video accident
Photo Credit: X

ಬಾಲ್ಕನಿಯಲ್ಲಿ ಕೆಲಸದ ನಡುವೆ ಸ್ವಲ್ಪ ರಿಲ್ಯಾಕ್ಸ್ ಆಗೋಣ ಎಂದು ವ್ಯಕ್ತಿಯೊಬ್ಬ ಬಾಲ್ಕನಿಯಲ್ಲಿ ನಿಂತಿದ್ದಾಗ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದು ಪ್ರಾಣವನ್ನೇ ಕಳೆದುಕೊಂಡ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

ಕೆಲವೊಮ್ಮೆ ಸಾವು ಹೇಗೆ ಬರುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಎಷ್ಟೋ ಬಾರಿ ನಾವು ಸ್ವಲ್ಪ ಹೊತ್ತು ಸುಮ್ಮನೇ ಗಾಳಿ ತೆಗೆದುಕೊಳ್ಳೋಣ ಎಂದು ಬಾಲ್ಕನಿಗೆ ಬಂದು ಒರಗಿ ನಿಲ್ಲುತ್ತೇವೆ. ಆದರೆ ಇದೇ ರೀತಿ ಮಾಡಲು ಹೋಗಿ ಈ ವ್ಯಕ್ತಿಯ ಜೀವವೇ ಹೋಗಿದೆ.

ಅಂಗಡಿಯೊಂದರಲ್ಲಿ ಕೆಲಸ ಮಾಡುವ ಈ ವ್ಯಕ್ತಿ ಕೈಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡು ಸ್ವಲ್ಪ ಹೊತ್ತು ರಿಲ್ಯಾಕ್ಸ್ ಆಗಲು ಅಲ್ಲೇ ಇದ್ದ ಬಾಲ್ಕನಿಯ ಕಂಪೌಂಡ್ ಮೇಲೆ ಒರಗಿ ನಿಲ್ಲಲು ಹೊರಟಿದ್ದಾರೆ.

ಈ  ವೇಳೆ ಅವರಿಗೆ ಬ್ಯಾಲೆನ್ಸ್ ತಪ್ಪಿದ್ದು ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಸ್ಥಳದಲ್ಲೇ ಯುವಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ತಕ್ಷಣವೇ ಸುತ್ತಮುತ್ತಲಿನವರು ಬಂದರೂ ಪ್ರಯೋಜನವಾಗಿಲ್ಲ. ಈ ಭೀಕರ ವಿಡಿಯೋ ಇಲ್ಲಿದೆ ನೋಡಿ.

pic.twitter.com/H3PdjkCy3M

 

— FalconUpdatesHQ (@FalconUpdatesHQ) May 2, 2026

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ತಾನೇ ಕೊಂದು ಎಲ್ಲರೆದುರು ಎದೆ ಹಿಡಿದುಕೊಂಡು ಗೋಳಾಡಿದ ಗಂಡ, ಕೊನೆಗೆ ಏನಾಯ್ತು ನೋಡಿ Video