Publish Date: Fri, 01 May 2026 (12:39 IST)
Updated Date: Fri, 01 May 2026 (12:45 IST)
ಮದುವೆ ಮಂಟಪದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ಎಲ್ಲರೂ ನೋಡುತ್ತಿರುವಾಗಲೇ ಸಿನಿಮೀಯ ರೀತಿಯಲ್ಲಿ ವಧು ಎಸ್ಕೇಪ್ ಆದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಿನ ದಿನಗಳಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಕೆಲವು ಯುವತಿಯರು ಮನೆಯವರ ಒತ್ತಾಯಕ್ಕೋ, ಭಯಕ್ಕೋ ಮದುವೆಗೆ ಒಪ್ಪಿಗೆ ನೀಡುತ್ತಾರೆ. ಆದರೆ ಮದುವೆ ಮಂಟಪದಲ್ಲಿ ಮನಸ್ಸೊಪ್ಪದೇ ಮದುವೆ ಮುರಿದು ಬಿಡುತ್ತಾರೆ.
ಇದೇ ರೀತಿ ಮದುವೆ ಮನೆಯೊಂದರಲ್ಲಿ ವರ ಮತ್ತು ವಧು ಶಾಸ್ತ್ರ ನೆರವೇರಿಸಲು ಇಬ್ಬರೂ ಮಂಟಪದಲ್ಲಿ ನಿಂತಿರುತ್ತಾರೆ. ಈ ವೇಳೆ ಚಿಂತೆಯಲ್ಲಿದ್ದಂತೆ ಕಾಣುವ ವಧು ಇದ್ದಕ್ಕಿದ್ದಂತೆ ಅಲ್ಲಿಂದ ಓಡಲು ಆರಂಭಿಸುತ್ತಾಳೆ.
ಸಾಕಷ್ಟು ಜನ ನೆಂಟರಿಷ್ಟರು ಅಲ್ಲೇ ಇದ್ದರೂ ಇಂತಹದ್ದೊಂದು ಘಟನೆ ಊಹಿಸದ ಜನಕ್ಕೆ ಇದು ಶಾಕ್ ಆಗಿರುತ್ತದೆ. ಇದರ ಲಾಭ ಪಡೆಯುವ ವಧು ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ಈ ವಿಡಿಯೋಗೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು ಮದುವೆಯಾಗಿ ಗಂಡನ ಕೊಲೆ ಮಾಡುವ ಹೆಂಡತಿಗಿಂತ ಇದೇ ವಾಸಿ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ