Select Your Language

Notifications

webdunia
webdunia
webdunia
webdunia

ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ: ಮೊದಲೇ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಬರೆ

LPG Cylinder
ನವದೆಹಲಿ: ಒಂದೆಡೆ ಸಿಲಿಂಡರ್ ಸರಿಯಾಗಿ ಸಿಗುತ್ತಿಲ್ ಎಂದು ಉದ್ದಿಮೆಗಳು ಪರದಾಡುತ್ತಿದ್ದರೆ ಇತ್ತ ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ಸರ್ಕಾರ ಕಮರ್ಷಿಯಲ್ ಸಿಲಿಂಡರ್ ದರ 993 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಮರ್ಷಿಯಲ್ ಸಿಲಿಂಡರ್ ದರ 991 ರೂ.ಗೆ ಏರಿಕೆಯಾಗಿದೆ. ಮೇ 1 ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ಕಮರ್ಷಿಯಲ್ ಸಿಲಿಂಡರ್ ಸರಿಯಾಗಿ ಪೂರೈಕೆಯಾಗುತ್ತಿರಲಿಲ್ಲ. ಇದರಿಂದ ಹೋಟೆಲ್ ಉದ್ಯಮಗಳು ನೆಲಕಚ್ಚಿದ್ದವು. ಹಲವು ಹೋಟೆಲ್ ಗಳು ಬಾಗಿಲು ಬಂದ್ ಮಾಡುವ ಸ್ಥಿತಿಗೆ ತಲುಪಿದ್ದವು.

ಇದರ ಜೊತೆಗೆ ಈಗ ಗಾಯದ ಮೇಲೆ ಬರೆ ಹಾಕಿದಂತೆ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಒಂದೆಡೆ ಪೂರೈಕೆ ಕೊರತೆ ಇನ್ನೊಂದೆಡೆ ದರ ಏರಿಕೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಹೋಟೆಲ್ ಗಳಲ್ಲಿ ಊಟ-ತಿಂಡಿ ದರ ಏರಿಕೆಯಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

VIP ಸಂಸ್ಕೃತಿ ವಿರುದ್ಧ ಸಿಡಿದೆದ್ದ ತೆಲಂಗಾಣ ಜನ: ಮಾಡಿದ್ದೇನು ನೋಡಿ Video