Publish Date: Wed, 11 Mar 2026 (17:45 IST)
Updated Date: Wed, 11 Mar 2026 (17:49 IST)
ರಾಮನಗರ: ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್ ಅಭಾವ ಉದ್ಭವ ಹಿನ್ನೆಲೆ ಸಿಲಿಂಡರ್‌ಗೆ ಕನ್ನ ಹಾಕುತ್ತಿರುವ ಘಟನೆಗಳು ವರದಿಯಾಗಿದೆ. ಇದೀಗ ಇಂತಹದ್ದೇ ಘಟನೆ ಚನ್ನಪಟ್ಟಣದ ಕನಕನಗರದ ಕೃಷ್ಣಪ್ಪ ಎಂಬುವವ ಮನೆಯಲ್ಲಿ ಸಿಲಿಂಡರ್ ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಂದ ಖದೀಮ ಕಾಂಪೌಂಡ್ ಒಳಗೆ ಇದ್ದ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದಾನೆ.
ಫುಲ್ ಗ್ಯಾಸ್ ಇದ್ದ ಸಿಲಿಂಡರ್ ಅನ್ನು ಕಳ್ಳ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈಗಾಗಲೇ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಆತಂಕಗೊಂಡಿದ್ದ ಜನತೆಗೆ ತಮ್ಮ ಸಿಲಿಂಡರ್ ಅನ್ನು ಕಳ್ಳರ ಹಾವಳಿ ಹೊಸ ತಲೆನೋವಾಗಿದೆ. ಈ ಸಂಬಂಧ ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.