Select Your Language

Notifications

webdunia
webdunia
webdunia
webdunia

ಯುದ್ಧ ಪ್ರಾರಂಭವಾಗುತ್ತೆ ಅಂತ ಯಾರು ನಿರೀಕ್ಷಿಸಿದ್ರು: ಎಲ್ ಪಿಜಿ ಅಭಾವಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ Video

BY Vijayendra
ಬೆಂಗಳೂರು: ಯುದ್ಧ ಪ್ರಾರಂಭವಾಗುತ್ತದೆ ಎಂದು ಮೊದಲೇ ಯಾರು ನಿರೀಕ್ಷಿಸಿದ್ರು? ರಾಜ್ಯದಲ್ಲಿ ಎಲ್ ಪಿಜಿ ಅಭಾವವಾಗುತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ರೀತಿ ಉತ್ತರಿಸಿದ್ದಾರೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ರಾಜ್ಯಕ್ಕೂ ತಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಕಮರ್ಷಿಯಲ್ ಮತ್ತು ಗೃಹಬಳಕೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸಿಲಿಂಡರ್ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ವಿಜಯೇಂದ್ರ ಯುದ್ಧವಾಗುತ್ತದೆ ಎಂದು ಒಂದು ತಿಂಗಳ ಮೊದಲೇ ಯಾರು ನಿರೀಕ್ಷೆ ಮಾಡಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.

ಅಮೆರಿಕಾ-ಇಸ್ರೇಲ್, ಇರಾನ್ ನಡುವೆ ಯುದ್ಧವಾಗುತ್ತದೆ ಎಂದು ನಮ್ಮ ದೇಶಕ್ಕೆ ಅಥವಾ ಅಕ್ಕಪಕ್ಕದ ದೇಶಗಳಿಗೆ ಮೊದಲೇ ಯಾರಾದ್ರೂ ಹೇಳಿದ್ರಾ? ಯುದ್ಧವಾಗುತ್ತದೆ ಎಂದು ಯಾರಿಗೂ ನಿರೀಕ್ಷೆಯಿರಲಿಲ್ಲ. ಹಾಗಿದ್ದರೂ ನಮ್ಮ ಕೇಂದ್ರ ಸರ್ಕಾರ ಬೇಕಾದ ವ್ಯವಸ್ಥೆ ಮಾಡುತ್ತಿದೆ. ಕೇಂದ್ರಕ್ಕೆ ನಾವು ಸದ್ಯಕ್ಕೆ ಪತ್ರ ಬರೆಯುವ ಪರಿಸ್ಥಿತಿಯೇನೂ ಇಲ್ಲ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ