Select Your Language

Notifications

webdunia
webdunia
webdunia
webdunia

ಸಿಲಿಂಡರ್ ಬುಕಿಂಗ್ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತಂದೆ ಕೇಂದ್ರ ಸರ್ಕಾರ: ತಪ್ಪದೇ ಗಮನಿಸಿ

LPG Cylinder
ನವದೆಹಲಿ: ಎಲ್ ಪಿಜಿ ಅಭಾವದ ನಡುವೆ ಸಿಲಿಂಡರ್ ಬುಕಿಂಗ್ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಈ ಹೊಸ ನಿಯಮವೇನು ಇಲ್ಲಿದೆ ಸಂಪೂರ್ಣ ವಿವರ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದೇಶದಲ್ಲಿ ವಾಣಿಜ್ಯ ಮತ್ತು ಗೃಹ ಬಳಕೆ ಸಿಲಿಂಡರ್ ಗಳು ಮೊದಲಿನಂತೆ ಸಿಗುತ್ತಿಲ್ಲ. ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ನಿಯಮದಲ್ಲಿ ಬದಲಾವಣೆ ತಂದಿದೆ.

ಈ ಮೊದಲು 21 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕಿಂಗ್ ಮಾಡಬಹುದಾಗಿತ್ತು. ಆದರೆ ಈಗ 35 ದಿನಕ್ಕೆ ಏರಿಕೆ ಮಾಡಲಾಗಿದೆ. ಅಂದರೆ ಒಂದು ಸಿಲಿಂಡರ್ ಬಳಿಕ ಮತ್ತೊಂದು ಸಿಲಿಂಡರ್ ಬುಕಿಂಗ್ ಮಾಡಲು 35 ದಿನ ಕಾಯಬೇಕು.

ನೊಂದಾಯಿತ ಮೊಬೈಲ್ ಸಂಖ್ಯೆಯಿಂದಷ್ಟೇ ಬುಕಿಂಗ್ ಮಾಡಬಹುದಾಗಿದೆ. ಒಂದು ವೇಳೆ ಕೆವೈಸಿ ಅಪ್ ಡೇಟ್ ಆಗದೇ ಇದ್ದರೆ ತಕ್ಷಣವೇ ನಿಮ್ಮ ಏಜೆನ್ಸಿಗೆ ತೆರಳಿ ಕೆವೈಸಿ ಅಪ್ ಡೇಟ್ ಮಾಡಬೇಕು. ವಿತರಣೆ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ವಿತರಕರಿಗೆ ನೀಡಬೇಕಾಗುತ್ತದೆ. ಒಂದು ವೇಳೆ ನಿಗದಿಯಾದ 12 ಸಿಲಿಂಡರ್ ಗಿಂತ ಹೆಚ್ಚು ಸಿಲಿಂಡರ್ ಬೇಕಾದಲ್ಲಿ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ವಿವರಗಳನ್ನು ಒದಗಿಸಬೇಕು. ಈ ವೇಳೆ ನಿಮಗೆ ಕರೆ ಬರಬಹುದು. ಆಗ ನೀವು ಹೆಚ್ಚಿನ ಸಿಲಿಂಡರ್ ಅಗತ್ಯದ ಬಗ್ಗೆ  ವಿವರಣೆ ನೀಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯೋ.. ದೇವಾ.. ಪೆಟ್ರೋಲ್ ತುಂಬಲು ಡ್ರಮ್, ಬಕೆಟ್ ಹಿಡ್ಕೊಂಡು ಬರೋದಾ Video