Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಲದಲ್ಲಿ ಸೋತ ಬಳಿಕ ದೊಡ್ಡ ನಿರ್ಧಾರಕ್ಕೆ ಮುಂದಾದ ಮಮತಾ ಬ್ಯಾನರ್ಜಿ

Mamata Banerjee
ಕೋಲ್ಕತ್ತಾ: ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದಲ್ಲಿದ್ದ ದೀದಿ ಮಮತಾಗೆ ಮರ್ಮಾಘಾತವಾಗಿದೆ. ಇದರ ಬೆನ್ನಲ್ಲೇ ಅವರಿಗೆ ತಪ್ಪಿನ ಅರಿವಾದಂತಿದೆ.

ಮಮತಾ ಬ್ಯಾನರ್ಜಿ ಇಷ್ಟು ದಿನ ಇಂಡಿ ಒಕ್ಕೂಟದ ಭಾಗ ಎಂದಿದ್ದರೂ ಎಲ್ಲಾ ಸಂದರ್ಭದಲ್ಲಿ ಇಂಡಿ ಒಕ್ಕೂಟದ ಜೊತೆಗೂಡಲು ಹಿಂದೇಟು ಹಾಕುತ್ತಿದ್ದರು. ತಮಗೆ ಪಶ್ಚಿಮ ಬಂಗಾಲದಲ್ಲ ಅಷ್ಟರಮಟ್ಟಿಗೆ ಹಿಡಿತವಿದೆ, ತಮ್ಮ ಪ್ರಾಬಲ್ಯ ಅಷ್ಟರಮಟ್ಟಿಗಿದೆ, ಇತರೆ ಪಕ್ಷಗಳ ನೆರವು ತಮಗೆ ಬೇಕಾಗಿಲ್ಲ ಎಂಬ ಭಾವನೆಯಲ್ಲಿದ್ದರು.

ಇದಕ್ಕಾಗಿಯೇ ಪಶ್ಚಿಮ ಬಂಗಾಲದಲ್ಲೂ ಇಂಡಿ ಮಿತ್ರ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸಲೇ ಇಲ್ಲ. ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆ ಕೈ ಜೋಡಿಸಲಿಲ್ಲ. ಆದರೆ ಈಗ ಪಶ್ಚಿಮ ಬಂಗಾಲದಲ್ಲಿ ಸೋತ ಬಳಿಕ ಇಂಡಿ ಒಕ್ಕೂಟದ ಜೊತೆ ಒಗ್ಗಟ್ಟಾಗುವ ಅಗತ್ಯವಿದೆ ಎನ್ನುವುದು ದೀದಿಗೆ ಅರಿವಾದಂತಿದೆ.

ಹೀಗಾಗಿಯೇ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮೊದಲ ಬಾರಿಗೆ ಇಂಡಿ ಒಕ್ಕೂಟ ಪಕ್ಷಗಳ ನೆರವು ಪಡೆಯುವ ಮತ್ತು ಈ ಒಕ್ಕೂಟವನ್ನು ಇನ್ನಷ್ಟು ಬಲಗೊಳಿಸಿ ಬಿಜೆಪಿ ವಿರುದ್ಧ ಹೋರಾಡುವ ಪಣ ತೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ. ಇಂಡಿ ಒಕ್ಕೂಟ ಒಗ್ಗಟ್ಟಾಗಿದ್ದರಷ್ಟೇ ಚುನಾವಣೆಗಳಲ್ಲಿ ಬಿಜೆಪಿಯನ್ನು ಎದುರಿಸಬಹುದು ಎಂಬ ಅರಿವು ಅವರಿಗೆ ಆದಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಗನ್ ಗೆ ದೀಪ ಹಚ್ಚಲು ಸ್ಟಾಲಿನ್ ಬಿಡಲಿಲ್ಲ, ಅದಕ್ಕೇ ಸೋತರು: ಓರ್ವ ವ್ಯಕ್ತಿಯ ಹೇಳಿಕೆ ವೈರಲ್ Video