Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಳದಲ್ಲಿ ಅವರಿವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಈ ಮಹಿಳೆ ಈಗ ಬಿಜೆಪಿ ಶಾಸಕಿ

Kalita Majhi
Photo Credit: X
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ಅವರಿವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಈ ಮಹಿಳೆ ಈಗ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇದು ನಿಜವಾದ ಪ್ರಜಾಪ್ರಭುತ್ವದ ಗೆಲುವು ಎಂದೇ ಹೇಳಬಹುದು.

ಬಂಗಾಳದ ಅಸ್ರಾಂನಿಂದ ಕಲಿತ್ ಮಾಜಿ ಎಂಬ ಬಡ ಮಹಿಳೆಗೆ ಟಿಕೆಟ್ ಸಿಕ್ಕಿತ್ತು. ಈಕೆಗೆ ಈಗ 12 ಸಾವಿರಕ್ಕೂ ಅಧಿಕ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದಾಳೆ. ಆದರೆ ಆಕೆಯ ಹಿನ್ನಲೆ ತಿಳಿದರೆ ನಿಜಕ್ಕೂ ಶಾಕಿಂಗ್ ಆಗಿದೆ.

ಕಲಿತ್ ಮಾಜಿ ತೀರಾ ಬಡತನದಲ್ಲಿ ಬೆಂದ ಹೆಣ್ಣು ಮಗಳು. ತನ್ನ ಮನೆಯ ನಿರ್ವಹಣೆಗಾಗಿ ಅವರಿವರ ಮನೆಯಲ್ಲಿ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದರು. ಇದರಿಂದ ಅವರು ಸಂಪಾದನೆ ಮಾಡುತ್ತಿದ್ದುದು ಕೇವಲ 2,500 ರೂ.

ಆದರೆ ಮಹಿಳಾ ಸಬಲೀಕರಣ ಎಂದು ಎಲ್ಲಾ ರಾಜಕಾರಣಿಗಳೂ ಬೀರ ಭಾಷಣಕ್ಕಷ್ಟೇ ಸೀಮಿತವಾಗಿರುತ್ತಾರೆ. ಆದರೆ ಕಲಿತ್ ಮಾಜಿ ಪ್ರಕರಣದಲ್ಲಿ ಅದು ನಿಜವಾಗಿದೆ. ಕಲಿತ್ ಪತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಒಬ್ಬನೇ ಮಗ 8 ನೇ ತರಗತಿ ವಿದ್ಯಾರ್ಥಿ.

ಕಲಿತ್ ಅದೃಷ್ಟದಿಂದ ಟಿಕೆಟ್ ಪಡೆದವರಲ್ಲ. ಬೂತ್ ಮಟ್ಟದಿಂದಲೇ ಪಕ್ಷದ ಕೆಲಸ ಮಾಡುತ್ತಾ ಇದೀಗ ವಿಧಾನಸಭೆಗೆ ಟಿಕೆಟ್ ಪಡೆದಿದ್ದರು. 2021 ರಲ್ಲಿಯೂ ಕಲಿತ್ ಸ್ಪರ್ಧಿಸಿದ್ದರು. ಆದರೆ ಅಂದು ಸೋಲು ಕಂಡಿದ್ದರು. ಹಾಗಿದ್ದರೂ ತೀರಾ ಸಾಮಾನ್ಯ ಹಿನ್ನಲೆಯಿಂದ ಬಂದ ಕಲಿತ್ ಮೇಲೆ ವಿಶ್ವಾಸವಿಟ್ಟು ಬಿಜೆಪಿ ಮತ್ತೊಂದು ಅವಕಾಶ ನೀಡಿತ್ತು. ಇದೀಗ ಗೆದ್ದು ಬೀಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಮತಾ ಬ್ಯಾನರ್ಜಿ ರಾಹುಲ್ ಗಾಂಧಿ ಮಾತು ಕೇಳಿದ್ರೆ ಕತೆಯೇ ಬೇರೆ ಆಗ್ತಿತ್ತು: ಸಂಜಯ್ ರಾವತ್