Select Your Language

Notifications

webdunia
webdunia
webdunia
webdunia

ಎಕ್ಸ್ ಪ್ರೆಸ್ ರೈಲಿನಲ್ಲೇ ಮದ್ಯ ಕಳ್ಳಸಾಗಣಿಕೆ: ವಿಡಿಯೋ ವೈರಲ್

viral video

Krishnaveni K

ಬಿಹಾರ , ಸೋಮವಾರ, 30 ಜೂನ್ 2025 (09:09 IST)
Photo Credit: X
ಬಿಹಾರ: ಎಕ್ಸ್ ಪ್ರೆಸ್ ರೈಲಿನಲ್ಲೇ ಬಿಂದಾಸ್ ಆಗಿ ಮದ್ಯ ಕಳ್ಳ ಸಾಗಣಿಕೆಯಾಗುತ್ತಿದೆಯಾ? ಈ ಒಂದು ವಿಡಿಯೋ ನೋಡಿದರೆ ಈ ಸಂಶಯ ಬರುತ್ತದೆ.

ಬಿಹಾರದಲ್ಲಿ ಕಂಡುಬಂದ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಬಿಹಾರದ ಬಾರಹ್ ಜಂಕ್ಷನ್ ನ ಔಟರ್ ಸಿಗ್ನಲ್ ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ವಿಭೂತಿ ಎಕ್ಸ್ ಪ್ರೆಸ್ ರೈಲಿನಿಂದ ಯಾರೋ ಮದ್ಯದ ಕಟ್ಟುಗಳನ್ನೇ ನಿರ್ಜನ ಪ್ರದೇಶದಲ್ಲಿ ರೈಲ್ವೇ ಟ್ರ್ಯಾಕ್ ನತ್ತ ಎಸೆಯುತ್ತಾರೆ. ಇದನ್ನು ಹೆಕ್ಕಿಕೊಳ್ಳಲು ಎರಡರಿಂದ ಮೂರು ಯುವಕರು ಬರುತ್ತಾರೆ. ರೈಲಿನಿಂದ ಎಸೆ ಪ್ಯಾಕೆಟ್ ಗಳನ್ನು ಸಂಗ್ರಹಿಸಿ ಕೊಂಡೊಯ್ಯುತ್ತಾರೆ.

ಮದ್ಯ ಕಳ್ಳಸಾಗಣಿಕೆ ಮಾಡುವುದು ಕಾನೂನು ಬಾಹಿರ. ಆದರೆ ಎಕ್ಸ್ ಪ್ರೆಸ್ ರೈಲಿನಲ್ಲೇ ಇಂತಹ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ ಎಂದರೆ ನಿಜಕ್ಕೂ ಶಾಕಿಂಗ್. ಪೊಲೀಸರು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ.



Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದಿನಿಂದ ಹವಾಮಾನದ ಈ ಬದಲಾವಣೆಯನ್ನು ತಪ್ಪದೇ ಗಮನಿಸಿ