ಇಂಡಿಗೋ ಅವ್ಯವಸ್ಥೆ... ಮಗಳಿಗೆ ಪ್ಯಾಡ್ ಬೇಕು ಎಂದು ಸಿಬ್ಬಂದಿ ಬಳಿ ಅಂಗಲಾಚಿದ ತಂದೆ Video

Krishnaveni K
ಶುಕ್ರವಾರ, 5 ಡಿಸೆಂಬರ್ 2025 (12:24 IST)
Photo Credit: Instagram
ನವದೆಹಲಿ: ಇಂಡಿಗೋ ವಿಮಾನದ ಸಮಸ್ಯೆಯಿಂದಾಗಿ ಮಗಳಿಗೆ ಸ್ಯಾನಿಟರಿ ಪ್ಯಾಡ್ ಕೊಡಿ ಎಂದು ಸಿಬ್ಬಂದಿ ಬಳಿ ತಂದೆಯೊಬ್ಬರು ಆಕ್ರೋಶದಿಂದ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ದೇಶದಲ್ಲಿ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿರುವುದರಿಂದ ಸಾಕಷ್ಟು ಪ್ರಯಾಣಿಕರು ಸಂಕಷ್ಟದಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಸೂಕ್ತ ಸ್ಥಳಗಳಿಗೆ ಹೋಗಲಾಗದೇ ಪ್ರಯಾಣಿಕರು ಅತಂತ್ರರಾಗಿದ್ದಾರೆ. ಹಲವರು ವಿಮಾನ ನಿಲ್ದಾಣದಲ್ಲೇ ಗಂಟೆಗಟ್ಟಲೆ ಕಾಯುವಂತಾಗಿದೆ.

ಇದೇ ರೀತಿ ಸಮಸ್ಯೆಗೊಳಗಾದ ವ್ಯಕ್ತಿಯೊಬ್ಬರು ತಮ್ಮ ಮಗಳಿಗಾಗಿ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ಸಿಬ್ಬಂದಿ ಮುಂದೆ ಸಾಕಷ್ಟು ಮಂದಿ ತಮ್ಮ ಸಂಕಷ್ಟ, ಅನುಮಾನಗಳನ್ನು ಕೇಳಲು ನಿಂತಿದ್ದಾರೆ.

ಈ ವೇಳೆ ಒಬ್ಬ ವ್ಯಕ್ತಿ ಸಿಸ್ಟರ್ ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್ ಬೇಕು. ಪ್ಯಾಡ್ ಬೇಕು ಕೊಡಿ. ನನ್ನ ಮಗಳಿಗೆ ರಕ್ತ ಬರುತ್ತಿದೆ. ಕೊಡಿ’ ಎಂದು ಆಕ್ರೋಶದಿಂದ ಕೇಳುತ್ತಾನೆ. ಆಗ ಸಿಬ್ಬಂದಿ ‘ನಾವು ಏನೂ ಸಾಧ್ಯವಿಲ್ಲ’ ಎನ್ನುತ್ತಾರೆ. ಆಗ ಮತ್ತಷ್ಟು ಕೋಪಗೊಳ್ಳುವ ವ್ಯಕ್ತಿ ‘ಯಾಕೆ ಆಗಲ್ಲ? ಸ್ಯಾನಿಟರಿ ಪ್ಯಾಡ್ ಕೊಡಿಸಿ’ ಎಂದು ಟೇಬಲ್ ಕುಟ್ಟಿ ಆಕ್ರೋಶ ಹೊರಹಾಕುತ್ತಾರೆ. ಈ ವಿಡಿಯೋ ಇಂಡಿಗೋ ಪ್ರಯಾಣಿಕರ ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.

 
 
 
 
 
 
 
 
 
 
 
 
 
 
 

A post shared by Suraj Prasad (@mememade69h)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿ ಗುದ್ದಾಟಕ್ಕೆ ಬ್ರೇಕ್ ಬೆನ್ನಲ್ಲೇ ಡಿಕೆ ಸಂಪುಟದಲ್ಲಿ ಮಂತ್ರಿಯಾಗಲ್ಲ ಎಂದ ರಾಜಣ್ಣ

ನಮ್ಮ ಪಕ್ಷಕ್ಕೆ ದುಡ್ಡು ಕೊಡದೇ ಇನ್ಯಾರಿಗೆ ಕೊಡೋಣ: ಡಿ.ಕೆ. ಶಿವಕುಮಾರ್ ಪ್ರಶ್ನೆ

ವಾಚ್ ಬಗ್ಗೆ ಪ್ರಶ್ನಿಸುವವರು ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು

ಪರಪ್ಪನ ಅಗ್ರಹಾರ ಕೈದಿಗಳ ಚಟ ತೀರಿಸಲು ಹೋಗಿ ಅರೆಸ್ಟ್ ಆದ ವಾರ್ಡನ್

Delhi Air Pollution, ರೇಖಾ ಗುಪ್ತಾ ಈ ಬಗ್ಗೆ ಮಹತ್ವದ ಹೇಳಿಕೆ

ಮುಂದಿನ ಸುದ್ದಿ
Show comments