Daily Horoscope

Select Your Language

Notifications

webdunia
webdunia
webdunia
webdunia

ಊಟ ಮಾಡಿದ್ಯಾ... ಮಾವುತ ಮತ್ತು ಆನೆಯ ನಡುವಿನ ಹೃದಯಸ್ಪರ್ಶಿ ಮಾತುಕತೆ Video

Viral vide of elephant
Photo Credit: X
ಮಾವುತ ಮತ್ತು ಆನೆಯ ನಡುವೆ ಮನುಷ್ಯರ ನಡುವೆ ನಡೆಯುವಂತೆ ಆತ್ಮೀಯವಾಗಿ ನಡೆಯುವ ಮಾತುಕತೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಪಳಗಿದ ಆನೆಗಳ ದೇಹ ದೈತ್ಯವಾದರೂ ಅವುಗಳ ಮನಸ್ಸು ಹೂವಿನಂತೆ ಮೃದು. ಅದರಲ್ಲೂ ತಮ್ಮ ಮಾವುತ ಎಂದರೆ ಅವುಗಳಿಗೆ ಅಚ್ಚುಮೆಚ್ಚು. ಅವರನ್ನು ಯಾರಿಗೂ ಬಿಟ್ಟುಕೊಡಲ್ಲ. ಅಂತಹದ್ದೇ ಪ್ರೀತಿಯ ಸನ್ನಿವೇಶದ ವಿಡಿಯೋವೊಂದು ಈಗ ವೈರಲ್ ಆಗಿದೆ.

ಇದು ಶ್ರೀರಂಗಂನಲ್ಲಿ ನಡೆದ ಘಟನೆ. ಮಾವುತ ಮತ್ತು ಆನೆಯ ನಡುವೆ ಆತ್ಮೀಯವಾಗಿ ಮಾತುಕತೆ ನಡೆಯುತ್ತದೆ. ಮಾವುತನನ್ನು ಪ್ರೀತಿಯಿಂದ ಅಂಟಿಕೊಂಡು ನಿಂತಿರುವ ಆನೆ ಆತ ಕೇಳಿದ್ದಕ್ಕೆಲ್ಲಾ ಹೂಂ.. ಎನ್ನುತ್ತಾ ತಲೆ ಅಲ್ಲಾಡಿಸುತ್ತದೆ.

ಊಟ ಮಾಡಿದ್ಯಾ ಎಂದು ಕೇಳಿದರೆ ಹೂಂ ಎಂದು ಶಬ್ಧ ಮಾಡುವುದಲ್ಲದೆ ತಲೆ ಅಲ್ಲಾಡಿಸಿ ಪ್ರತಿಕ್ರಿಯಿಸುತ್ತದೆ. ಮಾವುತ ಇನ್ನೇನೋ ಕೇಳುವುದಕ್ಕೆಲ್ಲವೂ ಹೂಂಗುಡುತ್ತದೆ. ಪಕ್ಕಾ ಮನುಷ್ಯರಂತೇ ಪ್ರತಿಕ್ರಿಯಿಸುವ ಆನೆಯ ಪ್ರೀತಿಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

pic.twitter.com/yg7BYX5Yyw

 

— ExploreBharat (@ExploreBharat47) April 30, 2026

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಕಟೌಟ್ ಮನೆಗೆ ಎತ್ತಿಕೊಂಡು ಹೋದ ವ್ಯಕ್ತಿ: ದೀಪ ಹಚ್ಚಿ ಪೂಜೆ ಮಾಡ್ತೀನಿ ಎಂದ Video