Daily Horoscope

Select Your Language

Notifications

webdunia
webdunia
webdunia
webdunia

ಬನ್ನೇರುಘಟ್ಟ ಬಳಿ ರಾತ್ರಿ ವಾಹನ ಚಲಾಯಿಸುವುದೆಂದರೆ ಭಯ, ಇದೇ ಕಾರಣಕ್ಕೆ

Bannerghatta Elephant Case
Photo Credit X
ಬನ್ನೇರುಘಟ್ಟ ಸಮೀಪದ ಕುಲುಮೆಪಾಳ್ಯ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದೀಗ ರಾತ್ರಿ ವೇಳೆ ಕಾರಿನಲ್ಲಿ ಹೋಗುತ್ತಿದ್ದ ಮಂದಿಗೆ ಕಾಡಾನೆಯೊಂದು ರಸ್ತೆ ಮಧ್ಯದಲ್ಲಿ ಸಿಕ್ಕಿದ್ದು, ಇದನ್ನು ಅವರು ವಿಡಿಯೋ ಮಾಡಿದ್ದಾರೆ. 

ಒಂಟಿ ಸಲಗ ಕೆಲಹೊತ್ತು ರಸ್ತೆಲ್ಲೇ ನಿಂತಿದ್ದ ವಾಹನವನ್ನು ನೋಡುತ್ತಲೇ ನಿಂತಿದೆ. ರಸ್ತೆಯಲ್ಲಿ ಚಲಿಸುತ್ತಿದ್ದಾಗ ಒಮ್ಮೆಲೇ ಬೃಹತ್ ಗಾತ್ರದ ಕಾಡಾನೆಯನ್ನು ನೋಡಿ, ವಾಹನದಲ್ಲಿದ್ದವರು ಶಾಕ್ ಆಗಿದ್ದಾರೆ. 

ರಾತ್ರಿ ವೇಳೆಯಲ್ಲಿ ಗ್ರಾಮಗಳಿಗೆ ನುಗ್ಗುತ್ತಿರುವ ಆನೆಗಳ ಗುಂಪು, ರಸ್ತೆಗಳಲ್ಲೇ ನಿಂತು ವಾಹನ ಸವಾರರಿಗೆ ಭೀತಿ ಹುಟ್ಟಿಸುತ್ತಿವೆ. ಮೂರಕ್ಕೂ ಹೆಚ್ಚು ಆನೆಗಳ ಗುಂಪು ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿದ್ದು, ನೀಲಗಿರಿ ತೋಟಗಳು ಹಾಗೂ ರೈತರ ಜಮೀನುಗಳಲ್ಲಿ ಸಂಚರಿಸುತ್ತಿವೆ. ಒಂದು ವೇಳೆ ರಸ್ತೆ ಮಧ್ಯೆ ನಿಂತ ಗಜರಾಜನನ್ನು ಕಂಡು ವಾಹನ ಸವಾರರು ಬೆಚ್ಚಿಬಿದ್ದ ಘಟನೆಗಳು ನಡೆದಿದೆ. 

ಈ ಪರಿಸ್ಥಿತಿಯಿಂದ ಗ್ರಾಮಸ್ಥರು ಜೀವ ಭಯದಲ್ಲಿ ದಿನಚರಿಯನ್ನು ನಡೆಸುವಂತಾಗಿದೆ. ರಾತ್ರಿ ವೇಳೆಯಲ್ಲಿ ಹೊರಗೆ ಹೋಗಲು ಕೂಡ ಜನರು ಹೆದರುತ್ತಿದ್ದಾರೆ. ಕಾಡಾನೆಗಳ ನಿರಂತರ ಸಂಚಾರಕ್ಕೆ ತಡೆ ಹಾಕುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೇಲ್ ಕೊರತೆ: ಗೊಂದಲದ ಬಗ್ಗೆ ರಾಮಲಿಂಗಾ ರೆಡ್ಡಿ ಸ್ಪಷ್ಟನೆ