ಚಾಮರಾಜನಗರ: ಬಂಡೀಪುರದಲ್ಲಿ ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ದಾಳಿಗೊಳಗಾದ ವ್ಯಕ್ತಿಗೆ ನಂಜನಗೂಡಿನ ಅರಣ್ಯ ಇಲಾಖೆ 25 ಸಾವಿರ ರೂ ದಂಡ ವಿಧಿಸಿದ್ದಾರೆ.
ಆನೆ ಎದುರು ಹುಚ್ಚಾಟ ಮೆರೆಯಲು ಹೋಗಿ, ದಾಳಿಗೊಳಗಾದ ಪ್ರವಾಸಿಗನ ವಿಡಿಯೋ ಭಾರೀ ವೈರಲ್ ಆಗಿತ್ತು.
ಆರಂಭದಲ್ಲಿ ಅರಣ್ಯಾಧಿಕಾರಿಗಳು ಕೇರಳದ ವ್ಯಕ್ತಿ ಎಂದು ನಂಬಿದ್ದರು ಮತ್ತು ಅದರಂತೆ ಹುಡುಕಾಟ ನಡೆಸಿದರು. ನಂತರ ಆತ ನಂಜನಗೂಡಿನ ಬಸವರಾಜು ಎಂದು ತಿಳಿದುಬಂದಿದೆ. ಘಟನೆಯ ನಂತರ ಆತ ಅರಣ್ಯ ಇಲಾಖೆ ಕೇರಳಕ್ಕೆ ಪ್ರಯಾಣಿಸಿದರು ಮತ್ತು ಕರ್ನಾಟಕಕ್ಕೆ ಹಿಂತಿರುಗಿದರು, ಪತ್ತೆ ತಪ್ಪಿಸಲು ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ಅಧಿಕಾರಿಗಳು ಅಂತಿಮವಾಗಿ ಆತನನ್ನು ಪತ್ತೆಹಚ್ಚಿ ದಂಡ ವಿಧಿಸಿದರು.
ಬಂಕಾಪುರದ ದೇವಸ್ಥಾನಕ್ಕೆ ಹೋಗಿದ್ದೆ, ವಾಪಸ್ ಬರುವಾಗ ಮೋಜು ಮಸ್ತಿಗೆ ಸೆಲ್ಫಿ, ಫೋಟೊ ತೆಗೆಸಿಕೊಳ್ಳಲು ನಿಂತಿದ್ದ ನನ್ನ ಮೇಲೆ ಕಾಡಾನೆಯೊಂದು ದಾಳಿ ಮಾಡಿತು.
ಇನ್ನು ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು, ಸೆಲ್ಫಿ ತೆಗೆಯಬಾರದು ಎಂದು ಬಂಡೀಪುರ ಅರಣ್ಯಾಧಿಕಾರಿ ಬಸವರಾಜು ಅವರು ಸಾರ್ವಜನಿಕ ಜಾಗೃತಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.