ಯಾದಗಿರಿ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಎನ್ ರಾಜಣ್ಣ ಅವರ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ ಎಂದು ಮಾಜಿ ಸಚಿವ ರಾಜುಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಸುರಪುರದಲ್ಲಿ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಹಾಗೂ ಪಕ್ಷದಿಂದ ವಜಾ ಸಂಬಂಧ ಪ್ರತಿಕ್ರಿಯಿಸಿದ ಅವರು, ರಾಜಣ್ಣನ ಬಳಿಕ ಇದೀಗ ಸತೀಶ್ ಜಾರಕಿಹೊಳಿಯನ್ನು ಮುಗಿಸಲು ಪ್ಲಾನ್ ಮಾಡಲಾಗುತ್ತದೆ. ನಾಗೇಂದ್ರ, ರಾಜಣ್ಣ ಆಯ್ತು ನೆಕ್ಸ್ಟ್ ಸತೀಶ್ ಜಾರಕಿಹೊಳಿ ಸರದಿ. ಓಪನ್ ಆಗಿಯೇ ಹೇಳ್ತೀನಿ. ನಮ್ಮ ಕಮ್ಯುನಿಟಿಯಲ್ಲಿ ನಾವು ಹುಟ್ಟತ್ತಲೇ ನಾಯಕರು.
ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದಕ್ಕೆ ರಮೇಶ್ ಜಾರಕಿಹೊಳಿ ಇದೇ ರೀತಿ ರಮೇಶ್ ಜಾರಕಿಹೊಳಿ ಮೇಲೂ ಆ ಕೆಲಸ ಆಯ್ತು. ನಾಗೇಂದ್ರನಿಗೆ ಆದ ಎಫೆಕ್ಸ್ ಇದೀಗ ರಾಜಣ್ಣ ಮೇಲೂ ಆಗಿದೆ. ಮುಂದೇ ಸತೀಶ್ ಅಣ್ಣನೂ ಮೇಲೂ ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್‌ನಲ್ಲಿರುವ 15 ಜನ ವಾಲ್ಮೀಕಿ ಶಾಸಕರು ರಾಜಣ್ಣನ ಪರ ಹೇಳಿಕೆ ಕೊಡಬೇಕು. ಆವಾಗ ಹೈಕಮಾಂಡ್‌ಗೆ ಬಿಸಿಮುಟ್ಟಿ ಯಥಾಸ್ಥಿತಿ ರಾಜಣ್ಣಗೆ ಸಚಿವ ಸ್ಥಾನ ಕೊಡ್ತಾರತೆ.
ಮುಂದೇ ವಾಲ್ಮೀಕಿ ನಾಯಕರಿಗೆ ಸಿಎಂ ಸ್ಥಾನ ಕೊಡಲಾಗುತ್ತೆ ಅಂತ ಕಿವಿಯಲ್ಲಿ ಹೋವಿಟ್ಟು ಹೇಳ್ತಾರೆ. ಆ ಆಸೆಗೆ ಬಿದ್ದು ಇವತ್ತು ಸಮಾಜವೇ ರಾಜಣ್ಣನ ಬಲಿ ಕೊಡುವ ಕೆಲಸ ಆಗ್ತಿದೆ. ರಾಜಣ್ಣನ ದೆಹಲಿಗೆ ಕರೆದುಕೊಂಡು ಹೋಗ್ತಾರೆ, ಸ್ವಲ್ಪ ದಿನ ಹೋಗಲಿ ಅಂತ ರಾಜಣ್ಣನ ಸಮಾಧಾನ ಮಾಡ್ತಾರೆ. ಅದಕ್ಕೇನಾದ್ರೂ ರಾಜಣ್ಣ ಸಮಾಧಾನವಾದರೆ, ಅವರ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ.
ಎಚ್ಚೆತ್ತು ವಾಲ್ಮೀಕಿ ಸಮುದಾಯ ಸತೀಶಣ್ಣನ ನೇತೃತ್ವದಲ್ಲಿ ರಾಜಣ್ಣ ಪರ ಪ್ರತಿಭಟಿಸಬೇಕು. ಹಾಗೇನಾದರೂ ಮಾಡಿದರೆ ನಾವು ಮುಂದೆ ರಾಜ್ಯದಲ್ಲಿ ರಾಜಕೀಯ ಮಾಡಬಹುದು. ಇಲ್ಲದಿದ್ದರೆ ಈ ಸಮಾಜದವರಲ್ಲಿ ಒಗ್ಗಟ್ಟಿಲ್ಲ, ಇವರಲ್ಲಿ ಹೊಂದಾಣಿಕೆ ಇಲ್ಲ. ಇವರನ್ನ ಹೇಗೆ ಬೇಕಾದರೂ ಬಲಿ ಕಾ ಬಕ್ರಾ ಮಾಡಬಹುದು ಅಂತ ತೆಗೆದುಕೊಂಡು ಹೋಗ್ತಾರೆ ಎಂದು ಎಚ್ಚರಿಸಿದ್ದಾರೆ.