ಚಾಮರಾಜನಗರ: ರಸ್ತೆ ಮಧ್ಯೆ ಅಡ್ಡಗಟ್ಟಿ ನಿಂತಿದ್ದ ಆನೆಯ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಂದಾದ ಕಾಡಾನೆಯೊಂದು ಅಟ್ಟಾಡಿಸಿ ತುಳಿಯಲು ಯತ್ನಿಸಿದ ಘಟನೆ ಬಂಡೀಪುರದ ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವೆ ಕಾಡಿನ ರಸ್ತೆಯಲ್ಲಿ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಭಯಾನಕವಾಗಿದ್ದು, ವ್ಯಕ್ತಿ ಜಸ್ಟ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಇನ್ನೂ ಕೆಲವರು ವ್ಯಕ್ತಿ ನಡೆದುಕೊಂಡ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಕೇರಳದ ಪ್ರವಾಸಿಗನೊಬ್ಬನ ಮೇಲೆ ಕಾಡು ಆನೆ ದಾಳಿ ನಡೆಸಿದೆ. ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ನಿಂತಿದ್ದು, ಈ ವೇಳೆ ಪ್ರವಾಸಿಗ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ಆನೆ ಪ್ರವಾಸಿಗನನ್ನು ಓಡಿಸಿಕೊಂಡು ಹೋಗಿದ್ದು, ಕೆಲಕಾಲ ಅಟ್ಟಾಡಿಸಿದೆ. ಓಡುವ ವೇಳೆ ಪ್ರವಾಸಿಗ ಕಾಲು ಜಾರಿ ಬಿದ್ದಿದ್ದು, ಆನೆಯ ಕಾಲಿನ ಕೆಳಗೆ ಸಿಲುಕಿಕೊಂಡಿದ್ದಾನೆ. ಬಳಿಕ ಆನೆ ತುಳಿಯಲು ಯತ್ನಿಸಿ ಸ್ಥಳದಿಂದ ಹೊರಟು ಹೋಗಿದೆ. ಪರಿಣಾಮ ಅದೃಷ್ಟವಶಾತ್ ಪ್ರವಾಸಿಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ