ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲೂ ಧರ್ಮಸ್ಥಳದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.
ದರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ್ದ. ಆತನ ದೂರಿನನ್ವಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ಇದೀಗ ಪ್ರಣಬ್ ಮೊಹಂತಿ ನೇತೃತ್ವದ ತಂಡ ಅನಾಮಿಕ ದೂರುದಾರನನ್ನು ಧರ್ಮಸ್ಥಳದ ವಿವಿಧ ಭಾಗಗಳಲ್ಲಿ ಆತ ತೋರಿಸಿದ ಕಡೆ ಮಣ್ಣು ಅಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ.
ಇದರ ಬಗ್ಗೆ ಬಿಜೆಪಿ ಸೇರಿದಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಿಂದೂ ದೇವಾಲಯದ ಮೇಲೆ ನಡೆಯುತ್ತಿರುವ ವ್ಯವಸ್ಥಿತಿ ಪಿತೂರಿ ಎಂದಿದ್ದರು. ಇದರ ಬಗ್ಗೆ ಈಗ ಸದನದಲ್ಲೂ ಪ್ರಸ್ತಾಪಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇದನ್ನೇ ಸಿಟಿ ರವಿ ಕೂಡಾ ಖಚಿತಪಡಿಸಿದ್ದಾರೆ.
ಸದನದ ಅಜೆಂಡಾದಲ್ಲಿ ಧರ್ಮಸ್ಥಳ ವಿಷಯವಿಲ್ಲ. ಹಾಗಿದ್ದರೂ ಧರ್ಮಸ್ಥಳ ಎನ್ನುವುದು ಹಲವು ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರ. ಈ ಕೇಂದ್ರಕ್ಕೆ ತೊಂದರೆಯಾಗುವುದನ್ನು ನಾವು ಸಹಿಸಲ್ಲ. ಹೀಗಾಗಿ ಸದನದಲ್ಲೂ ಧರ್ಮಸ್ಥಳ ಪ್ರಕರಣವನ್ನು ಪ್ರಸ್ತಾಪಿಸುವುದಾಗಿ ಸಿಟಿ ರವಿ ಹೇಳಿದ್ದಾರೆ.