Publish Date: Mon, 30 Mar 2026 (18:05 IST)
Updated Date: Mon, 30 Mar 2026 (18:08 IST)
ಬೆಂಗಳೂರು: ಸದ್ಯ ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್ ಕೊರತೆಯಿಲ್ಲ. ಇನ್ನು ಯುದ್ಧ ಹೀಗೆಯೇ ಮುಂದುವರೆದ್ರೆ ಸಮಸ್ಯೆ ಆಗಬಹುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ಇನ್ನೂ ಈ ಸಂಬಂಧ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಡೀಸೆಲ್ ಸಮಸ್ಯೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ತಕ್ಷಣಕ್ಕೆ ಯಾವುದೇ ಸಮಸ್ಯೆಯಿಲ್ಲ. ಇನ್ನೂ ನಾಲ್ಕು ನಿಗಮಗಳಿಗೂ ತೊಂದರೆಯಿಲ್ಲ, ಅದಲ್ಲದೆ ತಕ್ಷಣಕ್ಕಂತೂ ಯಾವುದೇ ಸಮಸ್ಯೆಯಿಲ್ಲ. ಯುದ್ಧ ಹೀಗೆ ಮುಂದುವರಿದ್ರೆ ಸಮಸ್ಯೆ ಆಗುವ ಸಾಧ್ಯತೆಯಿದೆ ಎಂದರು.
ಇನ್ನೂ ಬೆಂಗಳೂರು ಕರಗ ಆಚರಣೆ ಸಂಬಂಧ ಮಾತನಾಡಿದ ಬೆಂಗಳೂರು ಕರಗ ಎಪ್ರಿಲ್ 1ರಂದು ಮಧ್ಯರಾತ್ರಿ 12-30ಕ್ಕೆ ಇದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ನಾವು ಆಹ್ವಾನ ನೀಡಿದ್ದೆವು. ಕಳೆದ ಬಾರಿ ಸಿಎಂ ಆಗಮಿಸಿದ್ರು. ಚುನಾವಣೆ ಇದೆ ಆದರೂ ಪ್ರಯತ್ನಿಸುತ್ತೇನೆ ಎಂದು ಸಿಎಂ ಹೇಳಿದರು.
ಇಂದು ಡಿಕೆ ಶಿವಕುಮಾರ್‌ಗೆ ಅಹ್ವಾನ ನೀಡಲು ಬಂದಿದ್ದೇನೆ. ಇನ್ನೂ ಈ ಬಾರಿಯೂ ಹೆಚ್ಚು ವಿದ್ಯುತ್ ದೀಪಾಲಂಕರ ಹಾಕಿದ್ದೇವೆ. ವಿಧಿವಿಧಾನ ಎಲ್ಲವನ್ನು ಈಗಾಗಲೇ ಮಾಡ್ತಿದ್ದಾರೆ. ಬೇರೆ ರಾಜ್ಯದವರು, ಬೇರೆ ಜಿಲ್ಲೆಯವರು ಕರಗ ನೋಡಬೇಕು. ಯಾವುದೇ ರೀತಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ತಾರೆ ಎಂದರು.