Select Your Language

Notifications

webdunia
webdunia
webdunia
webdunia

Video: ಕಾಡಾನೆ ದಾಳಿಯಿಂದ ಕೂದಲೆಯಲ್ಲಿ ಬಚಾವ್.. ಹೃದಯವೇ ಬಾಯಿಗೆ ಬಂದ ಕ್ಷಣ

Viral video elephant
Photo Credit: X
ಮುನ್ನಾರ್: ರಾತ್ರಿ ಸಂಚಾರ ಮಾಡುವಾಗ ಕಾಡಾನೆ ದಾಳಿಗೆ ಕಾರಿನ ಸಮೇತ ನೆಲಕಚ್ಚಬೇಕಾಗಿದ್ದವರು ಕೂದಲೆಳೆಯಲ್ಲಿ ಬಚಾವ್ ಆದ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಇದು ನಡೆದಿರುವುದು ಕೇರಳದ ಮುನ್ನಾರ್ ಬಳಿ. ರಾತ್ರಿ ವೇಳೆ ಅರಣ್ಯ ಪ್ರದೇಶಗಳ ಬಳಿ ಹೆದ್ದಾರಿಗಳಲ್ಲಿ ಸಂಚರಿಸುವಾಗ ಮೈ ಎಲ್ಲಾ ಕಣ್ಣಾಗಿದ್ದರೂ ಸಾಲದು. ಕೆಲವೊಮ್ಮೆ ಕಾಡು ಪ್ರಾಣಿಗಳ ದಾಳಿಯಿಂದ ಎಷ್ಟೋ ಅವಘಡಗಳಾಗುವುದು ಇದೆ.

ಇದೇ ರೀತಿ ಮುನ್ನಾರ್ ಬಳಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕುಟುಂಬವೊಂದು ಆನೆ ದಾಳಿಗೆ ಬಲಿಯಾಗುವುದರಲ್ಲಿತ್ತು. ಕಾರನ್ನು ಅಡ್ಡಗಟ್ಟಿದ್ದ ಗಜರಾಜ ತನ್ನ ಸೊಂಡಿಲಿನಿಂದ ಅದನ್ನು ನೂಕಿ ಪಲ್ಟಿ ಮಾಡುವುದರಲ್ಲಿತ್ತು.

ಆದರೆ ಜಸ್ಟ್ ಮಿಸ್ ಆಯ್ತು. ಕೊನೆಗೆ ಅದೇ ಸಿಟ್ಟಿನಲ್ಲಿ ಸೊಂಡಿಲಿನಿಂದ ಕಾರನ್ನು ಮುಂದೆ ನೂಕಿತ್ತು. ಇದೇ ಕ್ಷಣವನ್ನು ಬಳಸಿಕೊಂಡ ಕಾರು ಚಾಲಕ ವೇಗವಾಗಿ ಕಾರನ್ನು ಮುಂದೋಡಿಸಿದ್ದಾನೆ. ಇದರಿಂದ ಜೀವ ಉಳಿದಿದೆ. ಈ ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ