Select Your Language

Notifications

webdunia
webdunia
webdunia
webdunia

ರಾಜ್ಯಸಭೆಯಲ್ಲಿ ಹಿಂಸಾಚಾರ: ತನಿಖಾ ಸಮಿತಿ ಸೇರಲು ಕಾಂಗ್ರೆಸ್ ತಿರಸ್ಕಾರ

ರಾಜ್ಯಸಭೆಯಲ್ಲಿ ಹಿಂಸಾಚಾರ: ತನಿಖಾ ಸಮಿತಿ ಸೇರಲು ಕಾಂಗ್ರೆಸ್ ತಿರಸ್ಕಾರ
ನವದೆಹಲಿ , ಶುಕ್ರವಾರ, 10 ಸೆಪ್ಟಂಬರ್ 2021 (14:27 IST)
ನವದೆಹಲಿ :  ಆಗಸ್ಟ್ 11 ರಂದು ಮುಂಗಾರು ಅಧಿವೇಶನ ಸಂದರ್ಭದಲ್ಲಿ ಸದನದಲ್ಲಿ ಸಂಭವಿಸಿದ್ದ ಹಿಂಸಾಚಾರ ಘಟನೆ ಕುರಿತ ತನಿಖೆಗೆ ಉದ್ದೇಶಿಸಲಾಗಿರುವ ತನಿಖಾ ಸಮಿತಿಯ ಭಾಗವಾಗಲು ಕಾಂಗ್ರೆಸ್ ತಿರಸ್ಕರಿಸಿದೆ.

ಈ ಸಂಬಂಧ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದು, ಆಗಸ್ಟ್ 11, 2021 ರ ಘಟನೆಗಳ ಕುರಿತು ತನಿಖಾ ಸಮಿತಿ ರಚಿಸುವುದು, ಸಂಸದರನ್ನು ಬೆದರಿಸಲು ಮೌನವಾಗಿ ವಿನ್ಯಾಸಗೊಳಿಸಿದಂತೆ ತೋರುತ್ತದೆ. ಇದು ಜನಪ್ರತಿನಿಧಿಗಳ ಧ್ವನಿಯನ್ನು ನಿಗ್ರಹಿಸುವುದಲ್ಲದೆ ಸರ್ಕಾರಕ್ಕೆ ಅನಾನುಕೂಲವಾಗಿರುವ ಎಲ್ಲವನ್ನು ಉದ್ದೇಶಪೂರ್ವಕವಾಗಿ ದೂರವಿಡುತ್ತದೆ ಎಂದು ಹೇಳಿದ್ದಾರೆ.
ಆದ್ದರಿಂದ, ನಾನು ನಿಸ್ಸಂದಿಗ್ಧವಾಗಿ ವಿಚಾರಣಾ ಸಮಿತಿ ರಚನೆಯನ್ನು ವಿರೋಧಿಸುತ್ತೇವೆ ಮತ್ತು ಈ ಸಮಿತಿಯ ನಾಮ ನಿರ್ದೇಶನಕ್ಕಾಗಿ ಪಕ್ಷದಿಂದ ಸದಸ್ಯರ ಹೆಸರನ್ನು ಪ್ರಸ್ತಾಪಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.
ಚರ್ಚೆಯಲ್ಲಿ ಪಾಲ್ಗೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಉತ್ಸುಕವಾಗಿದೆ ಮತ್ತ ಅಧಿವೇಶನವನ್ನು ಸುಗಮವಾಗಿ ನಡೆಸಿಕೊಂಡು ಹೋಗುವಲ್ಲಿ ಸರ್ಕಾರವೇ ಅಡ್ಡಿಯಾಗಿದೆ. ದೇಶದ ಆರ್ಥಿಕತೆ, ರೈತರ ಪ್ರತಿಭಟನೆ, ಹಣದುಬ್ಬರ, ತೈಲ ಬೆಳೆ ಏರಿಕೆ,ನಿರುದ್ಯೋಗ
ಮತ್ತಿತರ ಅನೇಕ ವಿಷಯಗಳ ಕುರಿತ ಚರ್ಚೆಗೆ ಕಾಂಗ್ರೆಸ್ ನೋಟಿಸ್ ನೀಡಿದರೂ, ತಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸಲೇ ಇಲ್ಲ. ಚರ್ಚೆ ಇಲ್ಲದೇ ಅನೇಕ ಬಿಲ್ ಗಳು, ನೀತಿಗಳನ್ನು ಅಂಗೀಕರಿಸಲಾಗಿದೆ ಎಂದು ಖರ್ಗೆ ಪತ್ರದಲ್ಲಿ ಹೇಳಿದ್ದಾರೆ. ಈ ಸಂಬಂಧ ಇತರ ಪ್ರತಿಪಕ್ಷಗಳ ಜೊತೆಗೆ ಮಾತನಾಡಿದ್ದು, ಬಹುತೇಕ ಎಲ್ಲಾ ಪಕ್ಷಗಳು ಉದ್ದೇಶಿಕಿ ತನಿಖಾ ಸಮಿತಿ ರಚನೆಯನ್ನು ತಿರಸ್ಕರಿಸಿವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯುಎಸ್ ನಲ್ಲಿ ಒಂದೇ ವಾರದಲ್ಲಿ 2,50,000 ಮಕ್ಕಳಿಗೆ ಕೊರೋನಾ