Select Your Language

Notifications

webdunia
webdunia
webdunia
webdunia

ಗೈರಾದ ಬಿಜೆಪಿ ಸಂಸದರ ಪಟ್ಟಿ ಕೇಳಿದ ಮೋದಿ!

ಗೈರಾದ ಬಿಜೆಪಿ ಸಂಸದರ ಪಟ್ಟಿ ಕೇಳಿದ ಮೋದಿ!
ಬೆಂಗಳೂರು , ಬುಧವಾರ, 11 ಆಗಸ್ಟ್ 2021 (14:39 IST)
ನವದೆಹಲಿ(ಆ.11): ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಮಂಡಿಸಿದ್ದ ನಿರ್ಣಯಗಳ ಮೇಲೆ ಮತದಾನ ನಡೆಯುವ ವೇಳೆ ಹಾಜರಿರದ ಸಂಸದರ ವಿವರಗಳನ್ನು ನೀಡುವಂತೆ ಪ್ರಧಾನಿ ಮೋದಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಂಗಳವಾರ ಸೂಚಿಸಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಈ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
‘ನ್ಯಾಯಾಧಿಕರಣ ಸುಧಾರಣಾ ಮಸೂದೆ’ಯನ್ನು ಸದನದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿ ಕೆಲ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಿದ್ದವು. ಈ ವೇಳೆ ಅನೇಕ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. ಇದು ಮೋದಿ ಗಮನಕ್ಕೆ ಬಂದಿದ್ದು, ಈ ಕಾರಣಕ್ಕೆ ಅವರು ಗೈರುಹಾಜರಿಯ ವಿವರ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ, ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟಿಮೋದಿ ಅಭಿನಂದಿಸಿದರು. ‘ನಿಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪೋಷಣ್ ಅಭಿಯಾನ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಕುರಿತು ಪ್ರಚಾರ ನಡೆಸಬೇಕು’ ಎಂದು ಸಂಸದರಿಗೆ ಸಲಹೆ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ಯಾವ ವಿಷಯ ಮುಖ್ಯ?: ಚುನಾವಣೆಗೂ ಮುನ್ನ ಮೋದಿಯಿಂದಲೇ ಸಮೀಕ್ಷೆ!