Select Your Language

Notifications

webdunia
webdunia
webdunia
webdunia

ಕೊನೇ ದಿನ ಮಾರ್ಷಲ್ಗಳ ಜತೆ ವಿಪಕ್ಷ ‘ಸಂಘರ್ಷ’!

ಕೊನೇ ದಿನ ಮಾರ್ಷಲ್ಗಳ ಜತೆ ವಿಪಕ್ಷ ‘ಸಂಘರ್ಷ’!
ನವದೆಹಲಿ , ಗುರುವಾರ, 12 ಆಗಸ್ಟ್ 2021 (12:23 IST)
ನವದೆಹಲಿ(ಆ.12): ಸಂಸತ್ ಕಲಾಪದ ಕೊನೆಯ ದಿನ ಕೂಡ ವಿಪಕ್ಷಗಳು ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ಎಬ್ಬಿಸಿ, ಮಾರ್ಷಲ್ಗಳೊಂದಿಗೆ ಸಂಘರ್ಷ ನಡೆಸಿದ ಘಟನೆ ನಡೆದಿದೆ. ಕಾಗದಪತ್ರಗಳನ್ನು ವಿಪಕ್ಷ ಸದಸ್ಯರು ಹರಿದು ತೂರಾಡಿದ್ದಾರೆ.

ಒಬಿಸಿ ಮಸೂದೆ ಪಾಸಾದ ಬಳಿಕ ವಿಮಾ ಕಂಪನಿಗಳ ಖಾಸಗೀಕರಣ ವಿಧೇಕಯವನ್ನು ಸರ್ಕಾರ ಕೈಗೆತ್ತಿಕೊಂಡಿತು. ಆಗ ಇದನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸಭಾಪತಿ ಪೀಠದತ್ತ ಮುನ್ನುಗ್ಗಲು ಯತ್ನಿಸಿದರು. ಅವರನ್ನು ತಡೆಯಲು 50 ಪುರುಷ/ಮಹಿಳಾ ಮಾರ್ಷಲ್ಗಳನ್ನು ನಿಯೋಜಿಸಲಾಯಿತು. ಈ ವೇಳೆ ಮಾರ್ಷಲ್ಗಳು ಹಾಗೂ ಸಂಸದರ ನಡುವೆ ಸಂಘರ್ಷ ನಡೆಯಿತು.
ಈ ನಡುವೆ, ಪುರುಷ ಸಂಸದರಿದ್ದ ಕಡೆ ಮಹಿಳಾ ಮಾರ್ಷಲ್ಗಳನ್ನು ಹಾಕಲಾಗಿತ್ತು. ಮಹಿಳಾ ಸದಸ್ಯರಿದ್ದ ಕಡೆ ಪುರುಷ ಮಾರ್ಷಲ್ಗಳನ್ನು ಹಾಕಲಾಗಿತ್ತು. ಇದಕ್ಕೆ ಆಕ್ಷೇಪಿಸಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಮಹಿಳಾ ಸಂಸದರಿಗೆ ಸುರಕ್ಷತೆ ಇಲ್ಲ’ ಎಂದು ಕಿಡಿಕಾರಿದರು.


Share this Story:

Follow Webdunia kannada

ಮುಂದಿನ ಸುದ್ದಿ

GSLV-F10 ರಾಕೆಟ್ನಲ್ಲಿ ತಾಂತ್ರಿಕ ದೋಷ; ಮಿಷನ್ ಪೂರ್ಣಗೊಳ್ಳಲು ವಿಫಲ