Publish Date: Sat, 27 Jun 2026 (10:49 IST)
Updated Date: Sat, 27 Jun 2026 (10:53 IST)
ಎಟಿಎಂ ಕೇಂದ್ರದೊಳಗೆ ಹೊಕ್ಕು ಹಣ ದೋಚಲು ಬಂದಿದ್ದ ದರೋಡೆಕೋರರನ್ನು ಮಹಾರಾಷ್ಟ್ರ ಪೊಲೀಸರು ಬರಿಗೈಯಿಂದಲೇ ಹಿಡಿದ ರೋಚಕ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ.
ನಮ್ಮ ದೇಶದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಎಟಿಂಎ ದರೋಡೆ ಮಾಡಿ ಸುಳಿವೂ ಸಿಗದಂತೆ ಓಡಿ ಹೋಗುವ ಪ್ರಕರಣಗಳು ಸಾಕಷ್ಟು ನಡೆದಿದೆ. ಆದರೆ ಇಲ್ಲಿ ದರೋಡೆಕೋರರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದರೋಡೆ ಮಾಡಲು ಒಳ ಹೊಕ್ಕಾಗ ಯಾರೋ ಹೊರಗಿನಿಂದ ಶಟರ್ ಕ್ಲೋಸ್ ಮಾಡಿದ್ದಾರೆ. ಹೀಗಾಗಿ ಖದೀಮರು ಒಳಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ ಇವರೆಲ್ಲರ ಕೈಯಲ್ಲಿ ಮಾರಕಾಸ್ತ್ರಗಳಿತ್ತು. ಹೀಗಾಗಿ ಅವರನ್ನು ಸೆರೆಹಿಡಿಯುವುದು ಅಪಾಯಕಾರಿ ಕೆಲಸವಾಗಿತ್ತು.
ಆದರೆ ನಾಲ್ಕೈದು ಪೊಲಿಸರ ತಂಡ ಒಂದೇ ಒಂದು ಗನ್ ಕೂಡಾ ಇಲ್ಲದೇ ಉಪಾಯವಾಗಿ ಶಟರ್ ನಿಧಾನವಾಗಿ ತೆಗೆದು ಅವರು ಹೊರಗೆ ಕಾಲಿಡುತ್ತಿದ್ದಂತೇ ಲಾಕ್ ಮಾಡಿಕೊಂಡು ಎಲ್ಲರ ಕೈಯಲ್ಲಿದ್ದ ಆಯುಧಗಳನ್ನೂ ವಶಕ್ಕೆ ಪಡೆದಿದ್ದಾರೆ. ಅವರ ರೋಚಕ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ