Daily Horoscope

Select Your Language

Notifications

webdunia
webdunia
webdunia
webdunia

ಇಂಥಾ ಮಕ್ಕಳು ಹುಟ್ಟುವುದಕ್ಕಿಂತ... ಹೆತ್ತ ತಂದೆಗೆ ಈ ಗತಿ ತಂದು ಬಿಟ್ಟ ಪಾಪಿ ಮಗ Video

Viral video father son
Photo Credit: X
ಹೆತ್ತ ತಂದೆಗೆ ದನಕ್ಕೆ ಹೊಡೆದ ಹಾಗೆ ಹೊಡೆದು ಪಾಪಿ ಮಗ ಕ್ರೌರ್ಯ ಮೆರೆಯುತ್ತಿರುವ ಸಿಸಿಟಿವಿ ದೃಶ್ಯದ  ವಿಡಿಯೋವೊಂದು ವೈರಲ್ ಆಗಿದ್ದು ಇಂಥಾ ಮಗ ಇರುವುದಕ್ಕಿಂತ ಮಕ್ಕಳೇ ಇಲ್ಲದಿದ್ದರೆ ಲೇಸು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ನಿಜಕ್ಕೂ ನಮಗೆ ಕಣ್ಣೀರು ತರಿಸುತ್ತದೆ. ಈ ವಿಡಿಯೋ ನೋಡುತ್ತಿದ್ದರೆ ಕಣ್ಣೀರಿನ ಜೊತೆ ಇಂಥಾ ಮಕ್ಕಳಿಗೆ ಸರಿಯಾಗಿ ಬಿಗಿದು ಬುದ್ಧಿ ಕಲಿಸಬೇಕು ಎನಿಸುತ್ತದೆ.

ಮನೆಯೊಂದರ ಹೊರಾವರಣದಲ್ಲಿ ಅಪ್ಪ ಮತ್ತು ಮಗನ ನಡುವೆ ಯಾವುದೋ ವಿಚಾರಕ್ಕೆ ಮಾತುಕತೆಯಾಗುತ್ತಿರುತ್ತದೆ. ಮಗ ಸಿಟ್ಟಿನಲ್ಲಿ ಮೊದಲು ತಂದೆಯ ಜೊತೆ ಮಾತನಾಡುತ್ತಿರುತ್ತಾನೆ. ನಂತರ ಕಪಾಳಕ್ಕೆ ಹೊಡೆಯಲು ಪ್ರಾರಂಭಿಸುತ್ತಾನೆ. ಎಲ್ಲಿಯವರೆಗೆ ಎಂದರೆ ತಂದೆ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದರೂ ಕ್ಯಾರೇ ಎನ್ನದೇ ಅಲ್ಲಿಯೂ ಕಾಲಿನಿಂದ ತುಳಿದು ಮನಬಂದಂತೆ ಹೊಡೆಯುತ್ತಾನೆ.

ವಿಪರ್ಯಾಸವೆಂದರೆ ಮನೆಯವರೆಲ್ಲಾ ತಡೆಯುವ ಪ್ರಯತ್ನ ಮಾಡುತ್ತಾರಾದರೂ ಆ ತಂದೆಯನ್ನು ರಕ್ಷಿಸಲು ಯಾರೂ ಮುಂದಾಗುವುದಿಲ್ಲ. ಕೊನೆಗೆ ಹೊಡೆತಕ್ಕೆ ನಿತ್ರಾಣನಾಗಿ ಬಿದ್ದಿದ್ದ ತಂದೆಯನ್ನು ದರ ದರನೆ ಕೈ ಹಿಡಿದು ಎಳೆದುಕೊಂಡು ಒಳಗೆ ಕರೆದುಕೊಂಡು ಹೋಗಿ ಅಲ್ಲೂ ಹೊಡೆಯುತ್ತಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಈತನ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


pic.twitter.com/BN9uLkfj06

 

— Majid Khan (@Arham1436) June 26, 2026

Share this Story:

Follow Webdunia kannada

ಮುಂದಿನ ಸುದ್ದಿ

ಛೀ ಇವಳೆಂಥಾ ಹೆಣ್ಣು.. ಪುಟ್ಟ ಮಗುವಿನ ಎದೆಗೇ ಒದ್ದ ಅಂಗನವಾಡಿ ಕಾರ್ಯಕರ್ತೆ.. ಮುಂದೇನಾಯ್ತು ನೋಡಿ Video