Publish Date: Thu, 25 Jun 2026 (13:09 IST)
Updated Date: Thu, 25 Jun 2026 (13:12 IST)
ಬೆಂಗಳೂರು: ಯುವತಿಯೊಬ್ಬಳು ಆರು ಬಾರಿ ಮದುವೆಯಾಗಿ ಗಂಡನ ಕಿರುಕುಳ ಎಂದು ಪರಿಹಾರ ಹಣ ಪಡೆದು ಏಳನೇ ಬಾರಿ ಮದುವೆಯಾಗಿ ಅದೇ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಮುಂದೆ ಬಂದಾಗ ನ್ಯಾಯಾಧೀಶರು ಏನು ಹೇಳಿದ್ರು ಗೊತ್ತಾ?
ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು ಕೆಲವರು ಕಾನೂನನ್ನು ತಮಗೆ ಬೇಕಾದಂತೆ ದುರ್ಬಳಕೆ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಗೃಹಹಿಂಸೆ ಪ್ರಕರಣದಲ್ಲಿ ಮಹಿಳೆಯರ ಪರವಾಗಿ ಕೋರ್ಟ್ ತೀರ್ಪು ನೀಡುತ್ತದೆ. ಇದನ್ನೇ ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ಇಲ್ಲೊಬ್ಬ ಮಹಿಳೆ ಆರು ಬಾರಿ ಮದುವೆಯಾಗಿ ಗಂಡನ ಕಿರುಕುಳ ಎಂದು 498ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಪರಿಹಾರವಾಗಿ ಹಣ ಪಡೆದಿದ್ದಾಳೆ. ಆರು ತಿಂಗಳಿಗೊಮ್ಮೆ ಗಂಡನಿಂದ ದೂರವಾಗಿ ಪರಿಹಾರ ಪಡೆದಿರುತ್ತಾಳೆ ಎನ್ನುವುದು ಕೋರ್ಟ್ ಗಮನಕ್ಕೆ ಬರುತ್ತದೆ.
ಏಳನೇ ಪತಿ ಕೋರ್ಟ್ ಮುಂದೆ ಇದೇ ಪ್ರಕರಣದ ವಿಚಾರಣೆಗೆ ಬಂದಿರುತ್ತಾನೆ. ಆತನ ಪರ ವಕೀಲರಿಂದ ವಿವರಣೆ ಪಡೆಯುವ ಜಡ್ಜ್ ಶಾಕ್ ಆಗುತ್ತಾರೆ. ಪ್ರತೀ ಬಾರಿ 6 ತಿಂಗಳಿಗೊಮ್ಮೆ ಗಂಡನಿಂದ ದೂರವಾಗುವುದು 498ಎ ಕೇಸ್ ಹಾಕೋದಾ? ಇದು ನಿಜಕ್ಕೂ ಅಕ್ಷಮ್ಯ. ನೀವು ಕಾನೂನನ್ನು ದುರ್ಬಳಕೆ ಮಾಡುತ್ತಿದ್ದೀರಿ ಎನ್ನುತ್ತಾರೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ