Select Your Language

Notifications

webdunia
webdunia
webdunia
webdunia

ಬೇಡ ಕಂದಾ.... ವಿದ್ಯುತ್ ಸ್ಪರ್ಶಿಸಲು ಹೋದ ಮರಿಯನ್ನು ಕೋತಿ ಹೇಗೆ ರಕ್ಷಿಸಿತು ನೋಡಿ Video

Monkey viral video
Photo Credit: X
ವಿದ್ಯುತ್ ಟ್ರಾನ್ಫಾರ್ಮರ್ ಸ್ಪರ್ಶಿಸಲು ಹೋದ ತನ್ನ ಮರಿಯನ್ನು ತಾಯಿ ಕೋತಿ ಉಪಾಯವಾಗಿ ರಕ್ಷಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಕ್ಕಳ ಮೇಲೆ ತಾಯಿಯ ಮಮತೆ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿಗಳೂ ತಮ್ಮ ಮರಿಗಳನ್ನು ಅಷ್ಟೇ ಜೋಪಾನವಾಗಿ ಕಾಪಾಡುತ್ತವೆ. ಅದಕ್ಕೆ ಈ ಕೋತಿಯ ವಿಡಿಯೋ ಸಾಕ್ಷಿಯಾಗಿದೆ.

ತಾಯಿ ಮತ್ತು ಮರಿ ಕೋತಿ ವಿದ್ಯುತ್ ಟ್ರಾನ್ಫಾರ್ಮರ್ ಬಳಿ ಆಟವಾಡುತ್ತಿರುತ್ತವೆ. ಈ ವೇಳೆ ಮರಿ ಕೋತಿ ಅರಿವಿಲ್ಲದೇ ಟ್ರಾನ್ಫಾರ್ಮರ್ ಮೇಲೆ ಹತ್ತಲು ನೋಡುತ್ತದೆ. ಒಂದು ವೇಳೆ ಅದನ್ನು ಸ್ಪರ್ಶಿಸಿದ್ದರೆ ಮರಿ ಕೋತಿಗೆ ವಿದ್ಯುತ್ ತಗುಲುತ್ತಿತ್ತು.

ಆದರೆ ತಾಯಿ ಕೋತಿಗೆ ಇದು ಅರಿವಾಗಿ ಮರಿ ಕೋತಿಯ ಬಾಲ ಹಿಡಿದು ಎಳೆದು ಹಿಂದಕ್ಕೆ ಕರೆಸಿಕೊಳ್ಳುತ್ತದೆ. ಬಳಿಕ ತನ್ನ ಮರಿಯನ್ನು ತೋಳಿನಲ್ಲಿ ಎತ್ತಿಕೊಂಡು ಜೀವ ಉಳಿಸುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಅಮ್ಮ-ಮಗುವಿನ ಬಾಂದವ್ಯ ಎನ್ನುವುದು ಮನುಷ್ಯರಿಗೆ ಮಾತ್ರ ಸೀಮಿತವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

pic.twitter.com/U31Dc6O0gL

 

— Riya Ghosh (@Riyaghoshm) June 24, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ನಿರೀಕ್ಷೆ