Daily Horoscope

Select Your Language

Notifications

webdunia
webdunia
webdunia
webdunia

ಮನಮೋಹನ್ ಸಿಂಗ್ ಕೊಡ್ತಿದ್ದಷ್ಟು ಅನುದಾನ ಕೊಡಿ ಎಂದ ರೇವಂತ್ ರೆಡ್ಡಿ, ಅದು ನಿಮ್ಮ ಖರ್ಚಿಗೂ ಸಾಲಲ್ಲ ಎಂದು ಕಾಲೆಳೆದ ಮೋದಿ Video

Modi-Revant Reddy
ಹೈದರಾಬಾದ್: ಮನಮೋಹನ್ ಸಿಂಗ್ ಕಾಲದಲ್ಲಿ ಕೊಡ್ತಿದ್ದಷ್ಟು ಅನುದಾನ ಕೊಡಿ ಎಂದು
Photo Credit: X
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೇಳಿದಾಗ ಅದು ನಿಮ್ಮ ಖರ್ಚಿಗೂ ಸಾಲಲ್ಲ ಎಂದು ಮೋದಿ ಸಾರ್ವಜನಿಕವಾಗಿಯೇ ಕಾಲೆಳೆದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತೆಲಂಗಾಣದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಮತ್ತು ರೇವಂತ್ ರೆಡ್ಡಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡುವಾಗ ರೇವಂತ್ ರೆಡ್ಡಿ ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಕೇಂದ್ರದಿಂದ ಅವರಿಗೆ ಸಾಕಷ್ಟು ಅನುದಾನ ಬರುತ್ತಿತ್ತು. ಹೀಗಾಗಿ ಅವರು ಗುಜರಾತ್ ಮಾಡೆಲ್ ರಾಜ್ಯ ಮಾಡಲು ಸಾಧ್ಯವಾಯಿತು.

ನಮಗೂ ತೆಲಂಗಾಣವನ್ನು ಅಭಿವೃದ್ಧಿ ಮಾಡಲು ಕೇಂದ್ರದಿಂದ ಅನುದಾನ ಬೇಕು. ಮನಮೋಹನ್ ಸಿಂಗ್ ಕಾಲಾವಧಿಯಲ್ಲಿದ್ದಂತೆ ನಮಗೂ ಅನುದಾನ ಕೊಡಿ. ಆಗ ನಾವೂ ಅಭಿವೃದ್ಧಿಯಾಗಬಹುದು ಎಂದಿದ್ದರು.

ಇದಕ್ಕೆ ನಂತರ ತಮ್ಮ ಭಾಷಣದ ಸರದಿ ಬಂದಾಗ ಮೋದಿ ಕಾಲೆಳೆದಿದ್ದಾರೆ. ‘ರೇವಂತ್ ಜೀ ನೀವು ಹೇಳಿದಂತೆ ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ನೀಡುತ್ತಿದ್ದಷ್ಟು ಅನುದಾನ ನೀಡಲು ನಾವು ರೆಡಿ. ಆದರೆ ಹಾಗೆ ಮಾಡಿದರೆ ನಿಮ್ಮ ರಾಜ್ಯಕ್ಕೆ ಈಗ ಸಿಗುತ್ತಿರುವುದರ ಅರ್ಧದಷ್ಟೂ ಸಿಗಲ್ಲ. ಹೀಗಾಗಿ ನನ್ನ ಜೊತೆ ಸೇರಿಕೊಳ್ಳಿ’ ಎಂದು ಕಾಲೆಳೆದಿದ್ದಾರೆ. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


pic.twitter.com/NaOJg571Za

 

— Sheetal Chopra ???????? (@SheetalPronamo) May 10, 2026

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆದ ಬೆನ್ನಲ್ಲೇ ದೇವಾಲಯಗಳ ಬಗ್ಗೆ ಜೋಸೆಫ್ ವಿಜಯ್ ಮಹತ್ವದ ಘೋಷಣೆ