Select Your Language

Notifications

webdunia
webdunia
webdunia
webdunia

ಸಿಎಂ ಆದ ಬೆನ್ನಲ್ಲೇ ದೇವಾಲಯಗಳ ಬಗ್ಗೆ ಜೋಸೆಫ್ ವಿಜಯ್ ಮಹತ್ವದ ಘೋಷಣೆ

Joseph Vijay
Photo Credit: Instagram
ಚೆನ್ನೈ: ತಮಿಳುನಾಡು ಸಿಎಂ ಆದ ಬೆನ್ನಲ್ಲೇ ಜೋಸೆಫ್ ವಿಜಯ್ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ.

ಕಾಂಗ್ರೆಸ್, ಸಿಪಿಐ, ವಿಸಿಕೆ ಸೇರಿದಂತೆ ಹಲವು ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ತಮಿಳುನಾಡಿನಲ್ಲಿ ಹೊಸ ಸರ್ಕಾರವೊಂದು ರಚನೆಯಾಗಿದೆ. ವಿಜಯ್ ಮೇಲೆ ತಮಿಳುನಾಡಿನ ಜನರಿಗೆ ಅಪಾರ ಭರವಸೆಯಿದೆ.

ಇದೀಗ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಜಯ್ ತಮಿಳುನಾಡಿನಾದ್ಯಂತ ದೇವಾಲಯಗಳ ಸುತ್ತಮುತ್ತ, ಶಾಲೆ, ಕಾಲೇಜು, ಬಸ್ ನಿಲ್ದಾಣದ ಸುತ್ತಮುತ್ತ ಮದ್ಯದಂಗಡಿಗಳನ್ನು ತೆರೆಯುವಂತಿಲ್ಲ ಎಂದು ಮಹತ್ವದ ಆದೇಶ ಹೊರಡಿಸಿದ್ದಾರೆ.

ಇನ್ನು, ಸಿಎಂ ಆಗಿ ಅಧಿಕಾರಿ ಸ್ವೀಕರಿಸಿದರೂ ವಿಜಯ್ ಇನ್ನೂ ವಿಶ್ವಾಸಮತ ಯಾಚಿಸಿಲ್ಲ. ಇಂದು ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಇದಾದ ಬಳಿಕ ವಿಜಯ್ ದೊಡ್ಡ ಪರೀಕ್ಷೆ ಪಾಸ್ ಆಗಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ತಾವು ನೀಡಿರುವ ಭರವಸೆಗಳನ್ನು ಯಾವ ರೀತಿ ಈಡೇರಿಸುತ್ತಾರೆ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದ ಈ ಜಿಲ್ಲೆಗಳಿಗೆ ಇಂದೂ ಭಾರೀ ಮಳೆ ಸೂಚನೆ