Select Your Language

Notifications

webdunia
webdunia
webdunia
webdunia

ಡಿಎಂಕೆ, ಎಐಡಿಎಂಕೆ ಸರ್ಕಾರ ರಚನೆಗೆ ಮುಂದಾದ್ರೆ ಮಹತ್ವದ ನಿರ್ಧಾರ ಕೈಗೊಂಡ ಟಿವಿಕೆ

TVK Vijay
ಚೆನ್ನೈ: ಡಿಎಂಕೆ ಮತ್ತು ಎಐಡಿಎಂಕೆ ಸರ್ಕಾರ ರಚನೆಗೆ ಮುಂದಾದರೆ ತಮ್ಮ ಪಕ್ಷ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಟಿವಿಕೆ ನಿರ್ಧರಿಸಿದೆ.
 

ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಸರ್ಕಸ್ ನಿಂತಿಲ್ಲ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಸಾಬೀತುಪಡಿಸಲು ಕೆಲವೇ ಸ್ಥಾನಗಳ ಕೊರತೆಯಲ್ಲಿರುವ ಟಿವಿಕೆ ಸರ್ಕಾರ ರಚನೆ ಮಾಡಲು ಸಾಧ್ಯವಾಗದೇ ಒದ್ದಾಡುತ್ತಿದೆ.

ಈ ನಡುವೆ ಎಐಡಿಎಂಕೆ ಮತ್ತು ಡಿಎಂಕೆ ಜೊತೆಗೂಡಿ ಸರ್ಕಾರ ರಚನೆ ಮಾಡಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿದೆ. ಇದರಿಂದ ಟಿವಿಕೆ ಪಾಳಯದಲ್ಲಿ ಆತಂಕ ಎದುರಾಗಿದೆ. ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಅವಕಾಶ ಸಿಗದೇ ಇದ್ದರೆ ಎಂಬ ಭೀತಿ ಎದುರಾಗಿದೆ.

ಈ ಹಿನ್ನಲೆಯಲ್ಲಿ ಪಕ್ಷ ದೊಡ್ಡ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಡಿಎಂಕೆ ಮತ್ತು ಎಐಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾದರೆ ತಮ್ಮ ಎಲ್ಲಾ 108 ಶಾಸಕರೂ ರಾಜೀನಾಮೆ ನೀಡುವುದಾಗಿ ಟಿವಿಕೆ ನಿರ್ಧರಿಸಿದೆ. ಒಂದು ವೇಳೆ ಆ ರೀತಿ ನಡೆದರೆ ಮತ್ತೆ ಚುನಾವಣೆ ನಡೆಸಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ