Publish Date: Tue, 05 May 2026 (11:16 IST)
Updated Date: Tue, 05 May 2026 (11:18 IST)
ಚೆನ್ನೈ: 2026 ಕ್ಕೆ ನಾನೇ ಸಿಎಂ ಆಗುತ್ತೇನೆ ಎಂದು ದಳಪತಿ ವಿಜಯ್ ಹೇಳಿದ್ದರು. ಆ ಮಾತು ಈಗ ನಿಜವಾಗುವ ಲಕ್ಷಣ ಕಾಣುತ್ತಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನ ಗೆದ್ದ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬಹುಮತಕ್ಕೆ 118 ಸ್ಥಾನಗಳು ಬೇಕು. ಹೀಗಾಗಿ ಈಗ ವಿಜಯ್ ಗೆ ಕೆಲವೇ ಸ್ಥಾನಗಳ ಅಗತ್ಯವಿದೆ.
ಇದರ ನಡುವೆ ಅವರು 2026 ಕ್ಕೆ ತಾವೇ ಸಿಎಂ ಎಂದು ಸೂಚನೆ ಕೊಟ್ಟಿದ್ದ ಕ್ಷಣವೊಂದು ಬೆಳಕಿಗೆ ಬಂದಿದೆ. 2024 ರಲ್ಲಿ ವಿಜಯ್ ಐಷಾರಾಮಿ ಕಾರಿಗೆ ಟಿಎನ್ 07 ಸಿಎಂ 2026 ಎಂದು ನಂಬರ್ ಪ್ಲೇಟ್ ಹಾಕಿಸಿಕೊಂಡಿದ್ದರು.
ಇದು ನಿರ್ದೇಶಕ ವೆಂಕಟ ಪ್ರಭು ಅವರು ವಿಜಯ್ ಮೇಲಿನ ಪ್ರೀತಿಯಿಂದ ತೆಗೆದುಕೊಂಡ ಕಾರು. ಆದರೆ ಕಾರಿನ ಮೇಲಿನ ನಂಬರ್ ಪ್ಲೇಟ್ ಆಗಲೇ ಸುದ್ದಿಯಾಗಿತ್ತು. ಈಗ ಮತ್ತೆ ಆ ಕಾರಿನ ನಂಬರ್ ವಿಚಾರ ಸುದ್ದಿಯಾಗಿದ್ದು, ವಿಜಯ್ ಅಂದೇ ಸುಳಿವು ನೀಡಿದ್ದರು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ