Publish Date: Sat, 22 Aug 2026 (15:14 IST)
Updated Date: Sat, 22 Aug 2026 (15:18 IST)
ರೈಲಿನಲ್ಲಿ ಸ್ಲೀಪರ್ ಸಿಟ್ ಬುಕ್ ಮಾಡಬೇಕೆಂದರೆ ಸೀಟ್ ಸಿಗಲು ಪರದಾಡಬೇಕಾಗುತ್ತದೆ. ಆದರೆ ಇಲ್ಲೊಂದು ಕಪಿಮಹಾಶಯ ಮಾಡಿದ ಕೆಲಸ ಎಲ್ಲರ ಮುಖದಲ್ಲಿ ನಗು ತರಿಸಿದೆ.
ಭಾರತೀಯ ರೈಲ್ವೆಯಲ್ಲಿ ಒಂದು ಕನ್ಫರ್ಮ್ ಸೀಟ್ ಪಡೆಯಲು ಸಾಮಾನ್ಯ ನಾರಿಕರು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ. ವೇಟಿಂಗ್ ಲಿಸ್ಟ್, ತತ್ಕಾಲ್ ಬುಕಿಂಗ್ ಎಂದು ಹೆಣಗಾಡಿದರೂ ಸೀಟು ಸಿಗದೆ ಸಾರ್ವಜನಿಕರು ಪರದಾಡುತ್ತಾರೆ. ಆದರೆ, ನಿನ್ನೆ 'ಲಕ್ಷ್ಮಿ ಎಕ್ಸ್‌ಪ್ರೆಸ್' ರೈಲಿನಲ್ಲಿ ನಡೆದ ಘಟನೆಯೊಂದು ಭಾರತೀಯ ರೈಲ್ವೆಯ ನಿಜವಾದ 'ರಾಜ' ಯಾರು ಎಂಬುದನ್ನು ಸಾಬೀತುಪಡಿಸಿದೆ!
ರೈಲು ಚಿಪಿಯಾನಾ ಬಳಿ ತಲುಪುತ್ತಿದ್ದಂತೆ, ದಿಢೀರನೆ ಮರ್ಕಟ ಮಹಾರಾಯನೊಬ್ಬ ಮಾಸ್ ಎಂಟ್ರಿ ಕೊಟ್ಟಿತು. ಯಾವುದೇ ಟಿಕೆಟ್ ಇಲ್ಲದೆ, ಮುಂಗಡ ಕಾಯ್ದಿರಿಸುವಿಕೆಯ ಹಂಗೂ ಇಲ್ಲದೆ ನೇರವಾಗಿ ಸ್ಲೀಪರ್ ಕೋಚ್‌ಗೆ ಬಂದಿಳಿದ ಈ 'ವಿಐಪಿ', ರಾಜಾರೋಷವಾಗಿ ಸೀಟ್ ಒಂದನ್ನು ಆಕ್ರಮಿಸಿಕೊಂಡು ಕುಳಿತಿತು. ಯಾವುದೇ ಟಿಕೆಟ್ ಪರಿಶೀಲಕ (TTE) ಬಂದು ದಂಡ ವಿಧಿಸುವ ಧೈರ್ಯ ತೋರದಂತೆ ತಮ್ಮದೇ ಆದ ಶೈಲಿಯಲ್ಲಿ ವಾನರರಾಯ ಆಸನ ಅಲಂಕರಿಸಿತ್ತು.
ಸಾಮಾನ್ಯ ಜನರು ಒಂದು ಸೀಟಿಗಾಗಿ ಪರದಾಡುತ್ತಿರುವಾಗ, ಇಂತಹ 'ವಿಐಪಿ' ಪ್ರಯಾಣಿಕರು ಯಾವುದೇ ಶುಲ್ಕವಿಲ್ಲದೆ ಪ್ರಯಾಣಿಸುವುದು ಸರಿಯೇ ಅಥವಾ ಟಿಟಿಇ ಇವರಿಗೂ ಒಂದು ಟಿಕೆಟ್ ಹರಿದು ಕೊಟ್ಟು ದಂಡ ವಸೂಲಿ ಮಾಡಬೇಕಿತ್ತೇ? ಪ್ರಸ್ತುತ ಈ ಮುದ್ದಾದ ಹಾಗೂ ತಮಾಷೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಯಾಣಿಕರಿಗೆ ಭರಪೂರ ಮನರಂಜನೆ ನೀಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ