Select Your Language

Notifications

webdunia
webdunia
webdunia
webdunia

ಬಡ ವ್ಯಕ್ತಿ ತನ್ನ ಅಳಲು ತೋಡಿಕೊಳ್ಳುತ್ತಿದ್ದರೆ ಜಿಲ್ಲಾಧಿಕಾರಿ ಐಫೋನ್ ಸ್ಕ್ರೋಲಿಂಗ್ ಮಾಡೋದರಲ್ಲೇ ಬ್ಯುಸಿ Video

Uttar Pradesh DC
ಉತ್ತರ ಪ್ರದೇಶದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿರುವ ದೃಶ್ಯವೊಂದು ಆಡಳಿತ ಯಂತ್ರದ ನಿರಾಸಕ್ತಿ ಮತ್ತು ಬಡವರ ಮೇಲಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾಯಿಯ ಚಿಕಿತ್ಸೆಗೆ ನೆರವು ಮತ್ತು ಕೋತಿಗಳ ಕಾಟದಿಂದ ಮುಕ್ತಿ ಕೋರಿ ಬಂದ ಬಡ ವ್ಯಕ್ತಿಯೊಬ್ಬನಿಗೆ ಕಚೇರಿಯಲ್ಲಿ ಎದುರಾಗಿದ್ದು ತೀವ್ರ ನಿರಾಶೆ.
 
ಯುವಕನ ವೃದ್ಧ ತಾಯಿಯ ಮೇಲೆ ಕೋತಿಗಳು ಭೀಕರವಾಗಿ ದಾಳಿ ಮಾಡಿದ್ದು, ತಲೆಗೆ ತೀವ್ರ ಗಾಯವಾಗಿ ಹಲವು ಹೊಲಿಗೆಗಳು ಬಿದ್ದಿದ್ದವು. ಈ ಹಿಂದೆ ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ "ಜಿಲ್ಲಾಧಿಕಾರಿಯಾದರೂ ತನ್ನ ಅಳಲನ್ನು ಕೇಳಬಹುದು, ತಾಯಿಯ ಚಿಕಿತ್ಸೆಗೆ ಒಂದಷ್ಟು ಸಹಾಯ ಧನ ಸಿಗಬಹುದು ಹಾಗೂ ಕೋತಿಗಳ ಹಾವಳಿಗೆ ಮುಕ್ತಿ ಸಿಗಬಹುದು" ಎಂಬ ಆಸೆಯಿಂದ ಆತ ಜಿಲ್ಲಾಧಿಕಾರಿಗಳ ಕಚೇರಿಗೆ ಧಾವಿಸಿದನು.
 
ಕಣ್ಣಲ್ಲಿ ನಿರೀಕ್ಷೆ, ಧ್ವನಿಯಲ್ಲಿ ಅಸಹಾಯಕತೆ ತುಂಬಿಕೊಂಡು ಆ ಬಡ ವ್ಯಕ್ತಿ ತನ್ನ ತಾಯಿಯ ನೋವಿನ ಕಥೆಯನ್ನು ವಿವರಿಸುತ್ತಿದ್ದ. ಆದರೆ ಎದುರಿಗಿದ್ದ ಜಿಲ್ಲಾಧಿಕಾರಿ ಗಂಭೀರವಾಗಿ ದೂರು ಕೇಳುವ ಬದಲು, ಕೈಯಲ್ಲಿ ಐಫೋನ್ 17 ಪ್ರೋ (iPhone 17 Pro) ಹಿಡಿದು ಸ್ಕ್ರೀನ್ ಸ್ಕ್ರೋಲ್ ಮಾಡುತ್ತಾ ನಗುತ್ತಾ ತಮ್ಮದೇ ಲೋಕದಲ್ಲಿದ್ದರು.
 
ತನ್ನ ಎದುರು ನಿಂತು ಅಳಲು ತೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮುಖವನ್ನೊಮ್ಮೆ ನೋಡಲು ಕೂಡ ಅಧಿಕಾರಿ ತಮ್ಮ ತಲೆಯನ್ನು ಮೇಲಕ್ಕೆತ್ತಲಿಲ್ಲ. ಬಡವನ ಅಸಹಾಯಕ ನೋಟ ಮತ್ತು ಅಧಿಕಾರಿಯ ಉದಾಸೀನತೆಯ ಈ ದೃಶ್ಯ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
pic.twitter.com/b2xU40MUKF

 

— Mandeep RajBhar (@MandeepRajBhar9) August 21, 2026

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿದ್ದರೂ… ಪ್ರಜ್ವಲ್ ರೇವಣ್ಣ ಬಗ್ಗೆ ಮತ್ತಷ್ಟು ಶಾಕಿಂಗ್ ವಿಚಾರಗಳು ಬಯಲು