Publish Date: Sat, 22 Aug 2026 (10:32 IST)
Updated Date: Sat, 22 Aug 2026 (10:49 IST)
ತಂದೆ ಬಚ್ಚಿಟ್ಟಿದ್ದ ಬಂಡಿಯನ್ನು ಮಗನೇ ತೋರಿಸಿ ಪೊಲೀಸರಿಗೆ ನೆರವಾಗಿದ್ದಲ್ಲದೆ, ತಂದೆಯ ಅಕ್ರಮವನ್ನು ಮಗನೇ ಬಯಲು ಮಾಡಿದ ಘಟನೆಯೊಂದು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೆಲ್ಲೂರು ಜಿಲ್ಲೆಯ ಅನಂತಸಾಗರದಲ್ಲಿ ಪೊಲೀಸರು ವಾಹನಗಳ ದಾಖಲೆಗಳ ಪರಿಶೀಲನೆಗಾಗಿ ಮನೆ ಮನೆಗೆ ತೆರಳಿ ತನಿಖೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸರಿಯಾದ ದಾಖಲೆಗಳಿಲ್ಲದ ಕಾರಣ ಸುರೇಶ್ ಎಂಬ ವ್ಯಕ್ತಿ ತನ್ನ ಬಂಡಿಯನ್ನು ಪಕ್ಕದ ಗಲ್ಲಿಯ ಮನೆಯೊಂದರಲ್ಲಿ ಬಚ್ಚಿಟ್ಟಿದ್ದನು.
ಪೋಲಿಸರು ತನಿಖೆಗೆ ಬಂದಾಗ, ಸುರೇಶ್ ಅವರ ಆರು ವರ್ಷದ ಮಗ ಮಹೇಂದ್ರ ಪೊಲೀಸರನ್ನು ನೇರವಾಗಿ ಬಂಡಿ ಬಚ್ಚಿಟ್ಟಿದ್ದ ಸ್ಥಳಕ್ಕೆ ಕರೆದೊಯ್ದು, "ನೀವು ಬರುತ್ತಿದ್ದೀರಿ ಅಂತಾನೇ ನಮ್ಮಪ್ಪ ಬಂಡಿ ಬಚ್ಚಿಟ್ಟಿದ್ದು" ಎಂದು ಮುಗ್ಧವಾಗಿ ಹೇಳಿ ತೋರಿಸಿಕೊಟ್ಟನು.
ಮಕ್ಕಳು ದೇವರ ಸಮಾನ ಎನ್ನುತ್ತಾರೆ. ಅವರಿಗೆ ತಪ್ಪು-ಒಪ್ಪುಗಳ ಅರಿವಿರುವುದಿಲ್ಲ. ತಮ್ಮ ಮುಗ್ಧತನದಿಂದ ಗಮನ ಸೆಳೆಯುತ್ತಾರೆ. ಇದೇ ರೀತಿ ಇಲ್ಲಿ ಅಪ್ಪ ಮಾಡಿದ ಕೃತ್ಯ ಮಗನಿಂದಲೇ ಬಯಯಾದಂತಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ