Select Your Language

Notifications

webdunia
webdunia
webdunia
webdunia

ಬಾವಿಗೆ ಬಿದ್ದಿದ್ದ ನಾಯಿಗಾಗಿ ಎಂಥಾ ರಿಸ್ಕ್ ತೆಗೆದುಕೊಂಡ ಈ ವ್ಯಕ್ತಿ: Video

Man rescue dog
ಸಹಾಯಕ್ಕಾಗಿ ಕಾಯುತ್ತಿದ್ದ ಆ ನಾಯಿಯ ಆರ್ತನಾದ ಯಾರೊಬ್ಬರ ಮನಸ್ಸನ್ನೂ ಕರಗಿಸಲಿಲ್ಲ. ಆಳವಾದ ಕೊಳವೆ ಬಾವಿಯೊಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ಮೂಕಪ್ರಾಣಿಯನ್ನು ಕಂಡು ಎಲ್ಲರೂ ನೋಡಿಯೂ ನೋಡದಂತೆ ಹೊರಟುಹೋದರು. ಆದರೆ, ಒಬ್ಬ ವ್ಯಕ್ತಿಯ ಮಾನವೀಯತೆ ಮತ್ತು ಸಾಹಸ ಒಂದು ಅಮೂಲ್ಯ ಜೀವಕ್ಕೆ ಮರುಜೀವ ನೀಡಿದೆ.
 
ಘಟನೆಯ ವಿವರಗಳ ಪ್ರಕಾರ, ನಾಯಿಯೊಂದು ಆಕಸ್ಮಿಕವಾಗಿ ತೆರೆದಿದ್ದ ಆಳವಾದ ಕೊಳವೆ ಬಾವಿಯೊಳಗೆ ಬಿದ್ದಿತ್ತು. ಬಾವಿಯ ಕತ್ತಲೆ ಮತ್ತು ಕಿರಿದಾದ ಜಾಗದಲ್ಲಿ ಚೀರುತ್ತಿದ್ದ ಆ ಪ್ರಾಣಿಯನ್ನು ರಕ್ಷಿಸಲು ಯಾರೂ ಮುಮಬರಲಿಲ್ಲ. ಪ್ರತಿಯೊಬ್ಬರೂ ತಮ್ಮದೇ ಕೆಲಸಗಳಲ್ಲಿ ನಿರತರಾಗಿದ್ದರೆ, ಆ ಜೀವ ಮಾತ್ರ ಬಾವಿಯೊಳಗೆ ನರಳುತ್ತಿತ್ತು.
 
ಆ ಸಮಯದಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಕ್ಷಣಮಾತ್ರವೂ ಯೋಚಿಸದೆ ಸಹಾಯಕ್ಕೆ ಧಾವಿಸಿದರು. ತಮ್ಮ ಸ್ವಂತ ಜೀವದ ಹದಗೆಡಿಸುವ ಅಪಾಯವಿದ್ದರೂ, ಅವರು ಧೈರ್ಯಗೆಡದೆ ಕಿರಿದಾದ ಬಾವಿಯೊಳಗೆ ಇಳಿದರು. ಕೆಳಗೆ ಇಳಿದು, ಹೆದರಿದ್ದ ಆ ನಾಯಿಯನ್ನು ಸುರಕ್ಷಿತವಾಗಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮೇಲೆ ಬಂದರು.
 
ಆ ವ್ಯಕ್ತಿಯ ಸಮಯೋಚಿತ ಸಾಹಸ ಮತ್ತು ಕರುಣೆ ಒಂದು ಮೂಕ ಜೀವಕ್ಕೆ ಹೊಸ ಜೀವನವನ್ನು ತಂದುಕೊಟ್ಟಿದೆ. ಸ್ವಾರ್ಥ ತುಂಬಿದ ಈ ಜಗತ್ತಿನಲ್ಲಿ, ಇಂತಹ ನಿಸ್ವಾರ್ಥ ಕಾರ್ಯಗಳು ಇಂದಿಗೂ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ನಿರೂಪಿಸುತ್ತವೆ. ಆ ವ್ಯಕ್ತಿಯ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
pic.twitter.com/5z0cijj4NZ

 

— Riya Ghosh (@Riyaghoshm) August 21, 2026

Share this Story:

Follow Webdunia kannada

ಮುಂದಿನ ಸುದ್ದಿ

ಜೆನ್ ಜಿ ಎಂದು ಸೈನಿಕರ ಮೇಲೆ ಕಿರುಚಾಡಿದ್ದ ಮಹಿಳೆಗೆ ಖಡಕ್ ಎಚ್ಚರಿಕೆ ಕೊಟ್ಟ ಅಮಿತ್ ಶಾ Video