Publish Date: Sat, 22 Aug 2026 (13:43 IST)
Updated Date: Sat, 22 Aug 2026 (13:49 IST)
ಬೆಂಗಳೂರು: ರೇಪ್ ಕೇಸ್ ನಲ್ಲಿ ಜೈಲು ಪಾಲಾಗಿದ್ದರೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನೊಳಗೂ ನಡೆಸುತ್ತಿದ್ದ ವ್ಯವಹಾರಗಳು ಈಗ ಬಯಲಾಗಿದೆ.
ಇತ್ತೀಚೆಗಷ್ಟೇ ಪ್ರಜ್ವಲ್ ರೇವಣ್ಣ ತಮ್ಮ ಬ್ಯಾರಕ್ ನಲ್ಲೇ ಮೊಬೈಲ್ ಬಳಸುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ ವೇಳೆ ಪ್ರಜ್ವಲ್ ಕೊಠಡಿಯಲ್ಲಿ ಮೊಬೈಲ್, ಪೆನ್ ಡ್ರೈವ್ ಮತ್ತು ಒಂದು ಡೈರಿ ಕೂಡಾ ಪತ್ತೆಯಾಗಿತ್ತು.
ಇದೀಗ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು ಈ ವೇಳೆ ಕೇವಲ ಒಂದುಲ್ಲ ಎರಡು ಫೋನ್ ಗಳನ್ನು ಪ್ರಜ್ವಲ್ ಬಳಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಪೈಕಿ ಒಂದು ಅಂಡ್ರಾಯ್ಡ್ ಫೋನ್, ಇನ್ನೊಂದು ಕೀ ಪ್ಯಾಡ್ ಫೋನ್ ಕೂಡಾ ಲಭ್ಯವಾಗಿದೆ ಎನ್ನಲಾಗಿದೆ.
ಈ ಫೋನ್ ಬಳಸಿ ಪ್ರಜ್ವಲ್ ಕೇವಲ ತಮ್ಮ ತಂದೆ-ತಾಯಿ ಮಾತ್ರವಲ್ಲ, ಹಲವರೊಂದಿಗೆ ಸಂಪಕರ್ದಲ್ಲಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಪ್ರಜ್ವಲ್ ಗೆ ಫೋನ್ ನೀಡಿದವರು, ಸಹಾಯ ಮಾಡಿದವರಿಗೂ ಸಂಕಷ್ಟ ಕಾದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ