Publish Date: Thu, 13 Aug 2026 (10:14 IST)
Updated Date: Thu, 13 Aug 2026 (10:18 IST)
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ನಿನ್ನೆ ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಜೈಲಲ್ಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೂ ಮೊಬೈಲ್, ಒಬ್ಬ ಸಹಾಯಕ ಸಾರ್ವಜನಿಕರು ಹುಬ್ಬೇರುವಂತೆ ಮಾಡಿದೆ.
ಅಶ್ಲೀಲ ವಿಡಿಯೋ, ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಜೈಲು ಪಾಲಾಗಿದ್ದಾರೆ. ಅವರ ಪೆನ್ ಡ್ರೈವ್ ಕೇಸ್ ಭಾರೀ ಸುದ್ದಿಯಾಗಿತ್ತು. ಈ ಪೈಕಿ ಒಂದು ಪ್ರಕರಣದಲ್ಲಿ ಅವರಿಗೆ ಜೀವನಪರ್ಯಂತ ಶಿಕ್ಷೆಯಾಗಿದೆ.
ಮೊನ್ನೆ ಜೈಲಿಗೆ ಸಿಸಿಬಿ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದಾಗ ಅವರ ಬಾರಕ್ ನಲ್ಲಿ ಮೊಬೈಲ್, ಪೆನ್ ಡ್ರೈವ್ ಮತ್ತು ಒಂದು ನೋಟ್ ಬುಕ್ ಪತ್ತೆಯಾಗಿತ್ತು. ಈ ಪೈಕಿ ನೋಟ್ ಬುಕ್ ತನ್ನದು ಎಂದು ಪ್ರಜ್ವಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಪೆನ್ ಡ್ರೈವ್ ಮತ್ತು ಮೊಬೈಲ್ ಅವರ ಸಹಾಯಕನಂತಿರುವ ಫೋಸ್ಕೋ ಕೇಸ್ ಆರೋಪಿ ಪ್ರತಾಪ್ ರಾಯ್ ನದ್ದು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ಮೊಬೈಲ್ ಬಳಸಿ ಪ್ರಜ್ವಲ್ ಕರೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಮತ್ತು ಪೆನ್ ಡ್ರೈವ್ ನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿದೆ. ಇನ್ನು ಜೈಲಿನಲ್ಲಿ ಪ್ರಜ್ವಲ್ ಗೆ ಸಹಾಯಕನಂತಿದ್ದ ಪ್ರತಾಪ್ ರಾಯ್ ನನ್ನು ಇದೀಗ ಬೇರೆ ಬ್ಯಾರಕ್ ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ