Select Your Language

Notifications

webdunia
webdunia
webdunia
webdunia

ಅಬ್ಬಬ್ಬಾ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಹಂಚಲು ಎಷ್ಟೊಂದು ಪೆನ್ ಡ್ರೈವ್ ಬೇಕಾಯ್ತು ನೋಡಿ

Prajwal Revanna
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಹಂಚಲು ಎಷ್ಟು ಪೆನ್ ಡ್ರೈವ್ ಬಳಕೆಯಾಯಿತು, ಎಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದರು ಎಂಬ ಅಂಶ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ.

ಹಾಸನದಲ್ಲಿ ಎರಡು ವರ್ಷಗಳ ಹಿಂದೆ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಪ್ರಜ್ವಲ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪ್ರಜ್ವಲ್ ಈ ಪೈಕಿ ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇದೀಗ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂದಿಸಿದಂತೆ ಹಾಸನ ಸಿವಿಲ್ ಕೋರ್ಟ್ ಗೆ 13,712 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಈ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ಅಶ್ಲೀಲ ವಿಡಿಯೋ ಹಂಚಲು 70 ಪೆನ್ ಡ್ರೈವ್ ಖರೀದಿಸಿರುವುದು ಬೆಳಕಿಗೆ ಬಂದಿದೆ. ಎಲ್ಲಾ ಪೆನ್ ಡ್ರೈವ್ ಗಳನ್ನೂ ಹಾಸನದಲ್ಲೇ ಖರೀದಿಸಲಾಗಿತ್ತು.

ಪ್ರಕರಣದಲ್ಲಿ 52 ಮಂದಿ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಪೈಕಿ 39 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಹೆಸರು ಇಲ್ಲ. ತಾಂತ್ರಿಕ ವರದಿ, ಎಫ್ಎಸ್ಎಲ್ ವರದಿ ಅನ್ವಯ ಆರೋಪ ಪಟ್ಟಿ ತಯಾರಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ