ಬೆಂಗಳೂರು: ಪ್ರಜ್ವಲ್ ರೇವಣ್ಣ ಥರಾ ಪ್ರತಾಪ್ ಸಿಂಹ ಮೊಬೈಲ್ ಏನಾದ್ರೂ ಪರಿಶೀಲನೆ ಮಾಡಿದ್ರೆ ಸೀದಾ ಜೈಲಿಗೇ ಹಾಕಬೇಕಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಣಣ್ ವಾಗ್ದಾಳಿ ನಡೆಸಿದ್ದಾರೆ.
ಡಾ ಯತೀಂದ್ರ ಇತ್ತೀಚೆಗೆ ತಮ್ಮ ತಂದೆ ಸಿದ್ದರಾಮಯ್ಯ ಮೈಸೂರಿಗೆ ಅಭಿವೃದ್ಧಿ ಮಾಡಿದ ವಿಚಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಂತೆ ಗ್ರೇಟ್ ಎಂದಿದ್ದರು. ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಟೀಕೆ ಮಾಡಿದ್ದರು. ಇದಕ್ಕೆ ಇಂದು ಎಂ ಲಕ್ಷಣ ತಿರುಗೇಟು ನೀಡಿದ್ದಾರೆ.
ನಮ್ಮ ಡಾ ಯತೀಂದ್ರ ಅವರ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಬಿಜೆಪಿಯಲ್ಲಿ ಕೇಳ್ತೀನಿ. ಮಹಾರಾಜರು ಶಿಕ್ಷಣ ಸಂಸ್ಥೆ, ಕುಡಿಯುವ ನೀರು, ಆಸ್ಪತ್ರೆಗಳು ಕೊಟ್ರು. ಅದೇ ರೀತಿ ಮಾನ್ಯ ಸಿದ್ದರಾಮಯ್ಯನವರು ಕುಡಿಯುವ ನೀರು ಕೊಟ್ಟಿದ್ದಾರೆ. 12 ಆಸ್ಪತ್ರೆ ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆ ಕಟ್ಟುವ ಕೆಲಸ ಮಾಡಿದ್ದಾರೆ. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಳಿಕ ಮೈಸೂರಿನ ಅಭಿವೃದ್ಧಿ ಮಾಡಿದ ನಾಯಕರೆಂದರೆ ಅದು ಸಿದ್ದರಾಮಯ್ಯನವರೇ. ಇದನ್ನು ನಾನು ಬಿಜೆಪಿಯವರಿಗೆ ಚಾಲೆಂಜ್ ಮಾಡಿ ಹೇಳ್ತೀನಿ. ಮಾಡಿದ್ದನ್ನು ಹೇಳಲು ನಮಗೆ ನಾಚಿಕೆಯಿಲ್ಲ. ಟಿಪ್ಪು ಎಂದು ಹೆಸರು ಕೇಳಿದ್ರೆ ಸಾಕು ಬಿಜೆಪಿಯವರು ಮಲಗಿದ್ದವರು ಏಳ್ತಾರೆ.
ಪಾಪ ಮಾಜಿ ಸಂಸದರೇ ನಿಮ್ಮ ಮೊಬೈಲ್ ಏನಾದ್ರೂ ಸೀಸ್ ಮಾಡಿ ಎಸ್ಐಟಿಗೆ ಕೊಟ್ಟುಬಿಟ್ರೆ ಪ್ರಜ್ವಲ್ ಇದ್ದಾನಲ್ಲಾ ಅವರ ಥರಾ ಜೈಲಿಗೆ ಹೋಗ್ತೀರಿ. ಮೈಸೂರಿಗೆ ನಿಮ್ಮ ಕೊಡುಗೆ ಏನಪ್ಪಾ ಅದನ್ನು ಹೇಳಪ್ಪ.. ಅದು ಬಿಟ್ಟು ಪ್ರತಿನಿತ್ಯ ಟೀಕೆ ಮಾಡೋದನ್ನು ಮೊದಲು ನಿಲ್ಲಿಸಬೇಕು ಎಂದಿದ್ದಾರೆ.