ಬೆಂಗಳೂರು: ಮದರಸಾದಲ್ಲಿರುವ ಗುರುಗಳಿಗೆ ಕನ್ನಡ ಕಲಿಸ್ತೇವೆ, ಅಲ್ಪಸಂಖ್ಯಾತರ ಸಾಮೂಹಿಕ ಮದುವೆಗೆ ಇನ್ನು 50000 ರೂ. ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಅಲ್ಪಸಂಖ್ಯಾತರ ಸಾಮೂಹಿಕ ಮದುವೆಗೆ 50000 ರೂ. ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಅದು ಇನ್ನೀಗ ಜಾರಿಗೆ ಬರಲಿದೆ. ಅಲ್ಪಸಂಖ್ಯಾತರು ಸಾಮೂಹಿಕ ವಿವಾಹವಾಗುವುದಾದರೆ ಸರ್ಕಾರದ ವತಿಯಿಂದ 50000 ರೂ. ಸಿಗಲಿದೆ.
ಇನ್ನು, ಮದರಸಾದಲ್ಲಿರುವ ಗುರುಗಳಿಗೂ ಕನ್ನಡ ಕಲಿಸಲಿದ್ದೇವೆ. ಇದಕ್ಕಾಗಿ ಈಗಾಗಲೇ 200 ಗುರುಗಳನ್ನು ಆಯ್ಕೆ ಮಾಡಿದ್ದೇವೆ. ನಮ್ಮದು ಕನ್ನಡ ರಾಜ್ಯ. ಹೀಗಾಗಿ ಎಲ್ಲರೂ ಕನ್ನಡ ಕಲಿಯಬೇಕು. ಮದರಸಾದಲ್ಲಿರುವ ಶಿಕ್ಷಕರಿಗೆ ಕನ್ನಡ ಕಲಿಸಿ ಅಲ್ಲಿ ಕನ್ನಡ ಕಲಿಕೆಗೆ ಅವಕಾಶ ಮಾಡಿಕೊಡಲಿದ್ದೇವೆ ಎಂದಿದ್ದಾರೆ.
ಇದಲ್ಲದೆ ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್ ಸೇರಿದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಿದ್ದೇವೆ. 214 ವಿದ್ಯಾರ್ಥಿಗಳಿಗೆ ನಾನೇ ವೈಯಕ್ತಿಕವಾಗಿ ಲ್ಯಾಪ್ ಟಾಪ್ ನೀಡಲಿದ್ದೇನೆ. ಅಲ್ಪಸಂಖ್ಯಾತರಿಗೆ ಇದರಿಂದ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.