Daily Horoscope

Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿಬರ್ತಿದೆ ಹೀಗೊಂದು ಸುದ್ದಿ

Prajwal Revanna
ಬೆಂಗಳೂರು: ಮನೆಕೆಲಸದಾಕೆ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಹೀಗೊಂದು ಸುದ್ದಿ ಕೇಳಿಬರುತ್ತಿದೆ.

ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟವಾಗಿ ಸುಮಾರು ಒಂದು ವರ್ಷವಾಗುತ್ತಾ ಬಂದಿದೆ. ಜೈಲಿನಲ್ಲಿ ಪ್ರಜ್ವಲ್ ಗೆ ಎಲ್ಲಾ ಕೈದಿಗಳಂತೆ ಶಿಕ್ಷೆಯ ಭಾಗವಾಗಿ ಕೆಲಸ ನೀಡಲಾಗಿದೆ. ಜೈಲು ಅಧಿಕಾರಿಗಳು ಅವರಿಗೆ ಗ್ರಂಥಾಲಯ ಸಹಾಯಕನ ಕೆಲಸ ನೀಡಲಾಗಿದೆ.

ಎಲ್ಲಾ ಕೈದಿಗಳಿಗೆ ನೀಡುವಂತೆ ಅವರಿಗೆ ದಿನಗೂಲಿಯಾಗಿ 520 ರೂ. ನೀಡಲಾಗುತ್ತದೆ. ಆದರೆ ಪ್ರಜ್ವಲ್ ಕೆಲಸಕ್ಕೆ ಹಾಜರಾಗುತ್ತಿಲ್ಲ ಎನ್ನಲಾಗಿದೆ. ಇದುವರೆಗೆ ಪ್ರಜ್ವಲ್ ಜೈಲಿನಲ್ಲಿ ಕೆಲಸ ಮಾಡಿಲ್ಲ. ಅಧಿಕಾರಿಗಳು ಕಟ್ಟುನಿಟ್ಟಾಗಿ  ಹೇಳಿದರೂ ತಲೆಯೇ ಕೆಡಿಸಿಕೊಂಡಿಲ್ಲ. ಓದು, ಧ್ಯಾನ ಎಂದು ತಮ್ಮದೇ ಲೋಕದಲ್ಲಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ. ಆರಂಭದಲ್ಲಿ ಮಾತ್ರ ಕೆಲವು ದಿನ ಕೆಲಸ ಮಾಡಿದ್ದ ಪ್ರಜ್ವಲ್ ನಂತರ ಆ ಕಡೆ ಮುಖವೂ ಹಾಕಿಲ್ಲ ಎಂದು ವರದಿಯಾಗಿದೆ. ಇದರ ಸತ್ಯಾಸತ್ಯತೆ ಬಗ್ಗೆ ಇನ್ನೂ ಖಚಿತವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನಗಳಿಗೆ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದ ಸಿಎಂ ಡಿಕೆ ಶಿವಕುಮಾರ್