Select Your Language

Notifications

webdunia
webdunia
webdunia
webdunia

ಸಮೋಸಾ ಪ್ರೇಮಿ ಲೋಕೋ ಪೈಲೆಟ್: ಬಿಸಿ ಬಿಸಿ ಸಮೋಸಾಗಿ ರೈಲನ್ನೇ ನಿಲ್ಲಿಸಿದ್ರು, ಇದೇನು ಲೋಕಲ್ ಬಸ್ಸಾ ಎಂದ ಜನ Video

Viral video loco pilot
ಇಂದೋರ್ (ಮಧ್ಯಪ್ರದೇಶ): ಆಹಾರಪ್ರಿಯರ ನಗರಿ ಎಂದೇ ಹೆಸರುವಾಸಿಯಾದ
Photo Credit: X
ಇಂದೋರ್‌ನಲ್ಲಿ ಪ್ರತಿಯೊಬ್ಬರಿಗೂ ತಮ್ಮಿಷ್ಟದ ತಿಂಡಿಯ ಮೇಲೊಂದು ಪ್ರತ್ಯೇಕ ಕ್ರೇಜ್ ಇರುತ್ತದೆ. ಆದರೆ, ಮಧ್ಯಪ್ರದೇಶದ ಇಂದೋರ್-ಮೋವ್ ರೈಲ್ವೆ ಮಾರ್ಗದಲ್ಲಿ ಚಲಿಸುವ ಮೆಮು ರೈಲಿನ ಲೋಕೋ ಪೈಲಟ್ (ರೈಲು ಚಾಲಕ) ಒಬ್ಬರಿಗೆ ಅಲ್ಲೇ ರಸ್ತೆಬದಿಯಲ್ಲಿದ್ದ ನಿರ್ದಿಷ್ಟ ಅಂಗಡಿಯ ಸಮೋಸಾ ಎಂದರೆ ಎಲ್ಲಿಲ್ಲದ ಪ್ರೀತಿ. ಎಷ್ಟರಮಟ್ಟಿಗೆ ಅಂದರೆ, ಸಮೋಸಾ ತಿನ್ನಲು ಆ ಅಂಗಡಿ ಮುಂದೆ ಯಾವುದೇ ರೈಲ್ವೆ ಸ್ಟೇಷನ್ ಇಲ್ಲದಿದ್ದರೂ ನಿಯಮ ಮೀರಿ ರೈಲನ್ನೇ ನಿಲ್ಲಿಸುತ್ತಿದ್ದರು!

'ಸಮೋಸಾ ಬ್ರೇಕ್' ಮತ್ತು ದಿನವೂ 10 ನಿಮಿಷ ಲೇಟ್!
ಸ್ಥಳೀಯರ ಆರೋಪದ ಪ್ರಕಾರ, ಈ ಲೋಕೋ ಪೈಲಟ್ ಪ್ರತಿದಿನ ಈ ಮಾರ್ಗದಲ್ಲಿ ರೈಲು ಚಲಾಯಿಸುವಾಗ ಆ ನಿರ್ದಿಷ್ಟ ಸಮೋಸಾ ಅಂಗಡಿಯ ಹತ್ತಿರ ರೈಲನ್ನು ಹಾರ್ನ್ ಮಾಡುತ್ತಾ ನಿಧಾನಗೊಳಿಸುತ್ತಿದ್ದರು. ನಂತರ ಹಳಿಗಳ ಪಕ್ಕದಲ್ಲೇ ರೈಲು ನಿಲ್ಲಿಸಿ, ಕೆಳಗಿಳಿದು ಹೋಗಿ ತಾಜಾ ಬಿಸಿಬಿಸಿ ಸಮೋಸಾಗಳನ್ನು ಪಾರ್ಸೆಲ್ ತೆಗೆದುಕೊಂಡು ಮತ್ತೆ ಇಂಜಿನ್ ಏರುತ್ತಿದ್ದರು.

ಚಾಲಕನ ಈ "ಸಮೋಸಾ ಪ್ರೀತಿಯ" ಚಟದಿಂದಾಗಿ ರೈಲು ಪ್ರತಿದಿನ ಕನಿಷ್ಠ 10 ನಿಮಿಷ ತಡವಾಗಿ ತಲುಪುತ್ತಿತ್ತು. 'ಸಮೋಸಾ ತಿಂದ ಮೇಲೆಯೇ ರೈಲು ಮುನ್ನಡೆಯುವುದು' ಎಂಬುದು ಈ ಮಾರ್ಗದ ನಿತ್ಯ ಪ್ರಯಾಣಿಕರಿಗೆ ಕಾಮಿಡಿಯಾಗಿತ್ತು!

ವಿಡಿಯೋ ಮಾಡಿ ವೈರಲ್ ಮಾಡಿದ ಪ್ರಯಾಣಿಕರು!
ಇತ್ತೀಚೆಗೆ ಚಾಲಕ ಎಂದಿನಂತೆ ರೈಲು ನಿಲ್ಲಿಸಿ, ಸಮೋಸಾ ಅಂಗಡಿಯಿಂದ ಪಾರ್ಸೆಲ್ ಹಿಡಿದು ಇಂಜಿನ್ ಏರುತ್ತಿದ್ದಾಗ ಸ್ಥಳೀಯರು ಮತ್ತು ಪ್ರಯಾಣಿಕರು ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಭಾರಿ ಚರ್ಚೆ ಶುರುವಾಗಿದೆ. ಸಾರ್ವಜನಿಕ ಆಸ್ತಿಯಾದ ರೈಲನ್ನು ಮತ್ತು ನೂರಾರು ಪ್ರಯಾಣಿಕರ ಸಮಯವನ್ನು ಕೇವಲ ಸಮೋಸಾಗಾಗಿ ವ್ಯರ್ಥ ಮಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ರೈಲ್ವೆ ಇಲಾಖೆಯಿಂದ ತನಿಖೆ ಆರಂಭ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ ಭಾರತೀಯ ರೈಲ್ವೆ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಮಂಡಳಿಯು, ಲೋಕೋ ಪೈಲಟ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಆದೇಶಿಸಿದೆ. ನಿಯಮ ಉಲ್ಲಂಘನೆ ಮತ್ತು ಕರ್ತವ್ಯ ಲೋಪದಡಿ ಆತನ ಉದ್ಯೋಗಕ್ಕೆ ಕಂಟಕ ಎದುರಾಗಿದೆ.

pic.twitter.com/wHfJWiueka

 

— काश/if Kakvi (@KashifKakvi) July 7, 2026

Share this Story:

Follow Webdunia kannada

ಮುಂದಿನ ಸುದ್ದಿ

ಬರುಯಿಪುರ್ 11 ರ ಬಾಲಕಿ ರೇಪ್, ಮರ್ಡರ್: ನನ್ನ ಮಗ ಆದ್ರೆ ಏನು, ರೇಪ್ ಮಾಡಿದಕ್ಕೆ ಹಾಗೇ ಆಗ್ಬೇಕು ಎಂದ ತಾಯಿ Video