Publish Date: Mon, 20 Jul 2026 (11:35 IST)
Updated Date: Mon, 20 Jul 2026 (11:54 IST)
ರೈಲು ಪ್ರಯಾಣದ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ಎಷ್ಟು ದೊಡ್ಡ ದುರಂತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಅತ್ಯಂತ ಕರುಣಾಜನಕ ಸಾಕ್ಷಿಯಾಗಿದೆ. ನಿಲ್ದಾಣಗಳಲ್ಲಿ ಕೇವಲ ಕೆಲವೇ ನಿಮಿಷಗಳ ಕಾಲ ನಿಲ್ಲುವ ರೈಲುಗಳಿಂದ ಇಳಿಯುವ ಮುನ್ನ ಪ್ರತಿಯೊಬ್ಬರೂ ನೂರು ಬಾರಿ ಯೋಚಿಸಬೇಕು. ಬಾಲಕಿಯೊಬ್ಬಳು ಇದೇ ರೀತಿ ತಪ್ಪು ಮಾಡಿ ರೈಲಿನಡಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ವಿಡಿಯೋ ವೈರಲ್ ಆಗಿದೆ.
ವರದಿಗಳ ಪ್ರಕಾರ, ಬಾಲಕಿಯೊಬ್ಬಳು ತನ್ನ ಕುಟುಂಬದೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ರೈಲು ಒಂದು ನಿಲ್ದಾಣದಲ್ಲಿ ಬಂದು ನಿಂತಾಗ, ತಿಂಡಿ ಖರೀದಿಸಲು ಅವಳು ರೈಲಿನಿಂದ ಕೆಳಗಿಳಿದಿದ್ದಾಳೆ. ರೈಲು ಅಲ್ಲಿ ಹೆಚ್ಚು ಸಮಯ ನಿಲ್ಲುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ಆಕೆಗೆ ಇರಲಿಲ್ಲ.
ಅಂಗಡಿಯಲ್ಲಿ ತಿಂಡಿ ಪಡೆದ ನಂತರ ಹಣ ಪಾವತಿಸಲು ಮುಂದಾದಾಗ, ಆಕೆ ಡಿಜಿಟಲ್ ಪೇಮೆಂಟ್ ಬಳಸಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯೋ ಅಥವಾ ಬೇರೆ ಯಾವುದೇ ಕಾರಣಕ್ಕೋ ಪೇಮೆಂಟ್ ವಿಳಂಬವಾಗಿದೆ. ಇತ್ತ ಸಮಯ ಮುಗಿಯುತ್ತಾ ಬಂದಂತೆ ಆಕೆಗೆ ಆತಂಕ ಶುರುವಾಗಿದೆ. ಅಷ್ಟರಲ್ಲೇ ರೈಲು ನಿಧಾನವಾಗಿ ಚಲಿಸಲು ಪ್ರಾರಂಭಿಸಿದೆ.
ಗಲಿಬಿಲಗೊಂಡ ಆ ಬಾಲಕಿ ಕೈಲಿದ್ದ ತಿಂಡಿಯನ್ನು ಅಲ್ಲೇ ಬಿಟ್ಟು ರೈಲಿನ ಕಡೆಗೆ ಓಡಿದ್ದಾಳೆ. ಆದರೆ ಅಷ್ಟರಲ್ಲಾಗಲೇ ರೈಲಿನ ವೇಗ ಕೊಂಚ ಹೆಚ್ಚಾಗಿತ್ತು. ಹೇಗಾದರೂ ಮಾಡಿ ರೈಲು ಹತ್ತಬೇಕೆಂಬ ಆತುರದಲ್ಲಿ ಓಡಿ ಹೋಗಿ ಬಾಗಿಲಿನ ಹ್ಯಾಂಡಲ್ ಹಿಡಿದಿದ್ದಾಳೆ. ಆದರೆ ದುರದೃಷ್ಟವಶಾತ್ ವೇಗವನ್ನು ನಿಯಂತ್ರಿಸಲಾಗದೆ ಆಕೆ ಆಯತಪ್ಪಿ ಪ್ಲಾಟ್‌ಫಾರ್ಮ್ ಮತ್ತು ಹಳಿಯ ಮಧ್ಯದ ಗ್ಯಾಪ್‌ಗೆ ಬಿದ್ದಿದ್ದಾಳೆ. ಸುತ್ತಮುತ್ತಲಿನ ಜನ ಹಾಗೂ ರೈಲಿನಲ್ಲಿದ್ದವರು ರಕ್ಷಿಸುವ ಮುನ್ನವೇ ಆಕೆ ರೈಲಿನ ಚಕ್ರಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ