Publish Date: Mon, 10 Aug 2026 (17:42 IST)
Updated Date: Mon, 10 Aug 2026 (17:47 IST)
ಪುಡುಚೇರಿ: "ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮತ್ತು ದೇಶದ ವಿಷಯ ಬಂದಾಗ ಭಾರತದ ತ್ರಿವರ್ಣ ಧ್ವಜವೇ ಪ್ರಥಮ" ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಪುಡುಚೇರಿಯಲ್ಲಿ ನಡೆದ 'ಹರ್ ಘರ್ ತಿರಂಗಾ' ಯಾತ್ರೆಯ ಚಾಲನಾ ಕಾರ್ಯಕ್ರಮದ ವೇಳೆಯಲ್ಲಿ ಸಂಭವಿಸಿದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸೌಂಡ್ ಮಾಡುತ್ತಿದೆ. ಕೇಸರಿ (ಭಗವಾ) ಧ್ವಜವನ್ನು ನೀಡಲು ಬಂದ ನಾಯಕನನ್ನು ತಡೆದು, ಗೃಹ ಸಚಿವರು ರಾಷ್ಟ್ರಧ್ವಜವನ್ನೇ ಕೋರಿ ಪಡಕೊಂಡ ಘಟನೆ ರಾಷ್ಟ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಘಟನೆಯ ಪೂರ್ಣ ವಿವರ
ಪುಡುಚೇರಿಯ ಮುರುಗಾ ಥಿಯೇಟರ್ ಸಿಗ್ನಲ್ ಬಳಿ ಹಮ್ಮಿಕೊಳ್ಳಲಾಗಿದ್ದ 'ಹರ್ ಘರ್ ತಿರಂಗಾ ರ್ಯಾಲಿ'ಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು.
ರ್ಯಾಲಿಯನ್ನು ಫ್ಲ್ಯಾಗ್-ಆಫ್ ಮಾಡಲು (ಚಾಲನೆ ನೀಡಲು) ವೇದಿಕೆಯಲ್ಲಿದ್ದ ನಾಯಕರು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯ ಸಚಿವರೊಬ್ಬರು ಅಮಿತ್ ಶಾ ಅವರ ಕೈಗೆ ರಾಷ್ಟ್ರಧ್ವಜದ ಬದಲಿಗೆ ಕೇಸರಿ/ಸಾಫ್ರಾನ್ ಧ್ವಜವನ್ನು ನೀಡಿ ಚಾಲನೆ ನೀಡುವಂತೆ ವಿನಂತಿಸಿದರು. ತಮ್ಮ ಕೈಗೆ ನೀಡಿದ ಧ್ವಜವನ್ನು ಗಮನಿಸಿದ ಅಮಿತ್ ಶಾ, ತಕ್ಷಣವೇ ಅದನ್ನು ನಿರಾಕರಿಸಿ, "ತಿರಂಗಾ ಎಲ್ಲಿದೆ? ರಾಷ್ಟ್ರಧ್ವಜ ಯಾತ್ರೆಗೆ ತ್ರಿವರ್ಣ ಧ್ವಜವೇ ಬೇಕು" ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಗೃಹ ಸಚಿವರ ಸೂಚನೆಯ ಬೆನ್ನಲ್ಲೇ ಅಧಿಕಾರಿಗಳು ಮತ್ತು ನಾಯಕರು ತಕ್ಷಣವೇ ಭಾರತದ ತ್ರಿವರ್ಣ ಧ್ವಜವನ್ನು ತಂದು ನೀಡಿದರು. ಆ ಬಳಿಕ ಅಮಿತ್ ಶಾ ಅವರು ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಬೀಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಯಾವುದೇ ಪಕ್ಷ ಅಥವಾ ಧರ್ಮಕ್ಕಿಂತಲೂ 'ರಾಷ್ಟ್ರಧ್ವಜ ಹಾಗೂ ದೇಶವೇ ಮೊದಲು' ಎಂಬುದಕ್ಕೆ ಗೃಹ ಸಚಿವರ ಈ ನಡೆ ಅತ್ಯುತ್ತಮ ಉದಾಹರಣೆಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ