Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲೇ ಕೊಳೆತ ಮಾಂಸ: ಇಂಥಾ ಹೋಟೆಲ್ ನಂಬಿ ಹೋಗೋದು ಹೇಗೆ Video

Bengaluru hotel raided
ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ದುಬಾರಿ ಹಾಗೂ ಪ್ರತಿಷ್ಠಿತ ಮಾಲ್ ಎಂದೇ ಹೆಸರಾಗಿರುವ ಯೂಬಿ ಸಿಟಿಯಲ್ಲಿರುವ  ಪ್ರಸಿದ್ಧ ‘ಸ್ಕೈ’ ಪಬ್ ಹಾಗೂ ಬಾರ್‌ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಅಡುಗೆಮನೆಯನ್ನು ಸೀಲ್ ಮಾಡಿ ಮುಚ್ಚಿಸಿದ್ದಾರೆ. ಇಂಥಾ ಹೋಟೆಲ್ ಗಳನ್ನು ನಂಬಿ ಊಟ ಮಾಡಲು ಹೋಗೋದು ಹೇಗೆ ಎಂದು ಜನ ಪ್ರಶ್ನಿಸುವಂತಾಗಿದೆ.
 
ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ವೇಳೆ ಅತ್ಯಂತ ಅಶುಚಿತ್ವದ ವಾತಾವರಣ, ಸಿಲಿಂಡರ್ ಹೊಂದಿಕೆಯಾಗದ ಸಂಗ್ರಹಣೆ ಹಾಗೂ ದಿನಬಳಕೆಯ ಆಹಾರ ಪದಾರ್ಥಗಳು ತೀವ್ರವಾಗಿ ಹಾಳಾಗಿರುವುದು ಕಂಡುಬಂದಿದೆ. ಅಡುಗೆಮನೆಯಲ್ಲಿ ಸುಮಾರು 45 ಕೆಜಿಗೂ ಹೆಚ್ಚು ಕೊಳೆತ ಕೋಳಿ ಮಾಂಸ ಹಾಗೂ ದನದ ಮಾಂಸ ಪತ್ತೆಯಾಗಿದ್ದು, ಇವುಗಳ ಮೇಲೆ ಶಿಲೀಂಧ್ರ ಬೆಳೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
 
ಸುಮಾರು 10 ದಿನಗಳ ಹಿಂದೆಯೇ ಕಾಲಾವಧಿ ಮುಗಿದಿದ್ದ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳನ್ನು ಬಳಕೆಗೆ ಇಡಲಾಗಿತ್ತು. ಸುಮಾರು 6 ಕೆಜಿ ತರಕಾರಿ ಕಟ್ಲೆಟ್‌ಗಳು ಹಾಗೂ 15 ಲೀಟರ್‌ಗೂ ಹೆಚ್ಚು ಮರುಬಳಕೆಯ ಅಪಾಯಕಾರಿ ಅಡುಗೆ ಎಣ್ಣೆಯನ್ನು ಅಧಿಕಾರಿಗಳು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.
 
ಬೆಂಗಳೂರಿನ ಹೋಟೆಲ್‌ಗಳ ಮೇಲೆ ಇಲಾಖೆಯ ಮೆಗಾ ರೈಡ್
ಬೆಂಗಳೂರು ನಗರ ಜಿಲ್ಲೆ ಮತ್ತು ಜಿಬಿಎ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತಾ ಇಲಾಖೆ ರಚಿಸಿದ್ದ 30 ವಿಶೇಷ ಅಧಿಕಾರಿಗಳ ತಂಡಗಳು ನಗರದ ಪ್ರಮುಖ 3-ಸ್ಟಾರ್ ಹಾಗೂ 5-ಸ್ಟಾರ್ ಹೋಟೆಲ್‌ಗಳು, ಬಾರ್‌ಗಳು ಹಾಗೂ ಪ್ರಸಿದ್ಧ ರೆಸ್ಟೋರೆಂಟ್‌ಗಳ ಮೇಲೆ ಏಕಕಾಲಕ್ಕೆ ಸಮಗ್ರ ತಪಾಸಣೆ ನಡೆಸಿವೆ. ಈ ವೇಳೆ ಒಟ್ಟಾರೆಯಾಗಿ 132 ಕೆಜಿಗೂ ಹೆಚ್ಚು ಹಾಳಾದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ನಾಶಪಡಿಸಲಾಗಿದೆ.
pic.twitter.com/vSZd7dT8ZE

 

— Deepak Bopanna (@dpkBopanna) August 10, 2026

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಐಐಟಿ ಕಾರ್ಯಕ್ರಮದಲ್ಲಿ ಉಪನಿಷತ್ ಗೆ ಪಠಿಸ್ತಾರೆ, ಕುರಾನ್ ಯಾಕಿಲ್ಲ: ಅರ್ಫಾ ಖಾನುಮ್ ಪ್ರಶ್ನೆ Video