Daily Horoscope

Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಐಐಟಿ ಕಾರ್ಯಕ್ರಮದಲ್ಲಿ ಉಪನಿಷತ್ ಗೆ ಪಠಿಸ್ತಾರೆ, ಕುರಾನ್ ಯಾಕಿಲ್ಲ: ಅರ್ಫಾ ಖಾನುಮ್ ಪ್ರಶ್ನೆ Video

Arfa Khanum
Photo Credit: X
ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಐಐಟಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪನಿಷತ್ತಿನ ಶ್ಲೋಕ ಹಾಗೂ ಮಂತ್ರಗಳನ್ನು ಪಠಿಸಿರುವುದು ಈಗ ದೇಶಾದ್ಯಂತ ಹೊಸ ವೈಚಾರಿಕ ಹಾಗೂ ಸಂವಿಧಾನಿಕ ಚರ್ಚೆಗೆ ಗ್ರಾಸವಾಗಿದೆ.
 
ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಅರ್ಫಾ ಖಾನಮ್ ಶೇರ್ವಾನಿ ಅವರು ಈ ಕುರಿತು ಪ್ರಬಲ ಪ್ರಶ್ನೆಗಳನ್ನು ಎತ್ತಿದ್ದು, ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತತೆ ಮತ್ತು ಸಂವಿಧಾನದ ಆಶಯಗಳ ಉಲ್ಲಂಘನೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
 
ಐಐಟಿ ದೆಹಲಿಯಂತಹ ಪ್ರಮುಖ ಸರ್ಕಾರಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಉಪನಿಷತ್ ಶ್ಲೋಕಗಳ ಪಠಣಕ್ಕೆ ಅವಕಾಶ ನೀಡಿದ್ದರೆ, ಅದೇ ವೇದಿಕೆಯಲ್ಲಿ ಕುರಾನ್‌ನ ಸೂಕ್ತಗಳು ಅಥವಾ ಇತರ ಧರ್ಮಗಳ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.
 
ಸರ್ಕಾರಿ ಹಣದಿಂದ ನಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಾಗಿ ಧರ್ಮನಿರಪೇಕ್ಷತೆಯನ್ನು ಕಾಯ್ದುಕೊಳ್ಳಬೇಕು. ಒಂದು ನಿರ್ದಿಷ್ಟ ಧರ್ಮದ ಆಚರಣೆ ಅಥವಾ ಶ್ಲೋಕಗಳಿಗೆ ಆದ್ಯತೆ ನೀಡುವುದು ಭಾರತೀಯ ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 
ಪ್ರಸ್ತುತ ದೇಶದ ರಾಜಕೀಯ ಸ್ಥಿತಿಯನ್ನು ವಿಶ್ಲೇಷಿಸುತ್ತಾ, "ಒಂದೆಡೆ ಪ್ರಧಾನಿ ಮೋದಿ ನೇತೃತ್ವದ ಆಡಳಿತದಲ್ಲಿ ಪ್ರಭುತ್ವ ಮತ್ತು ಧಾರ್ಮಿಕ ಚಿಹ್ನೆಗಳು ಒಂದಾಗುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನ, ಬಹುತ್ವ ಹಾಗೂ ಜಾತ್ಯತೀತ ಮೌಲ್ಯಗಳ ರಕ್ಷಣೆಗಾಗಿ ಸತತವಾಗಿ ಧ್ವನಿ ಎತ್ತುತ್ತಿದ್ದಾರೆ" ಎಂದು ಬಿಕರಿ ಮಾಡಿದ್ದಾರೆ.
 
ಈ ವಿಷಯವು ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ವಲಯದಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಹುಟ್ಟುಹಾಕಿದೆ.  ಸಂವಿಧಾನಿಕ ಜಾತ್ಯತೀತತೆ, ಸಾಂಸ್ಕೃತಿಕ ಪರಂಪರೆ ಮತ್ತು ಶಿಕ್ಷಣ ಸಂಸ್ಥೆಗಳ ಧರ್ಮನಿರಪೇಕ್ಷ ಸ್ವರೂಪದ ನಡುವಿನ ಗೆರೆ ಎಲ್ಲಿದೆ ಎಂಬ ಸಾರ್ವಜನಿಕ ಚರ್ಚೆಯನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.


pic.twitter.com/4dzc9kSuq6

 

— News Algebra (@NewsAlgebraIND) August 9, 2026

Share this Story:

Follow Webdunia kannada

ಮುಂದಿನ ಸುದ್ದಿ

5 ಲಕ್ಷ ರೂ ಹಣ ಬ್ಯಾಂಕ್ ನಲ್ಲಿಡುವುದು ನೆಲದಲ್ಲಿ ಹೂತಿಟ್ಟ ಬಡ ರೈತ ದಂಪತಿ: ಮುಂದೇನಾಯ್ತು, ಶಾಕಿಂಗ್ Video