Select Your Language

Notifications

webdunia
webdunia
webdunia
webdunia

ಬಡ ಮನೆಕೆಲದಾಕೆ ಮೇಲೆ ಮಾಲಿಕರದ್ದು ಇದೆಂಥಾ ದೌರ್ಜನ್ಯ: ಭೀಕರ ಘಟನೆ ಸಿಸಿಟಿವಿಯಲ್ಲಿ ದಾಖಲು video

House maid assaulted
Photo Credit: X
ಗುರ್‌ಗಾಂವ್: ನಾಗರಿಕ ಸಮಾಜ ತಲೆತಗ್ಗಿಸುವಂತಹ ಮತ್ತೊಂದು ಅಮಾನವೀಯ ಘಟನೆ ಹರಿಯಾಣದ ಗುರ್‌ಗಾಂವ್‌ನಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀಮಂತರ ಮನೆಯಲ್ಲಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಬಡ ಹುಡುಗಿಯೊಬ್ಬಳ ಮೇಲೆ ಮನೆಯ ಯಜಮಾನರು ಪಶುಗಳಂತೆ ದೌರ್ಜನ್ಯ ಎಸಗಿ, ಅಮಾನುಷವಾಗಿ ಹಲ್ಲೆ ನಡೆಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಆ ಬಡ ಹುಡುಗಿ ತನಗಾದ ಹಲ್ಲೆಯಿಂದ ರಕ್ಷಣೆ ಕೋರಿ ಅಳುತ್ತಿರುವುದು ಮತ್ತು ಆಕೆಯನ್ನು ಕ್ರೂರವಾಗಿ ಥಳಿಸುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ ಹಾಗೂ ಕಾಣಿಸುತ್ತದೆ. ಆಕೆ ಮಾಡಿದ ಸಣ್ಣ ತಪ್ಪಿಗಾಗಿ (ಅಥವಾ ಎಷ್ಟೇ ದೊಡ್ಡ ತಪ್ಪೇ ಇರಲಿ) ಈ ರೀತಿಯಾಗಿ ದೈಹಿಕ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ.

ಸ್ವಂತ ಮನೆ ನಡೆಸಲು, ಹೊಟ್ಟೆ ಬಟ್ಟೆಗಾಗಿ ಅನಿವಾರ್ಯವಾಗಿ ಪರರ ಮನೆಯಲ್ಲಿ ದುಡಿಯುವ ಬಡವರ ಅಸಹಾಯಕತೆಯನ್ನು ಇಂತಹ ಶ್ರೀಮಂತರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕ್ರೂರತೆಯ ಪರಮಾವಧಿ.

ಪೊಲೀಸರು ತಕ್ಷಣವೇ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಸ್ಥಳವನ್ನು ಗುರುತಿಸಿ ದೌರ್ಜನ್ಯ ಎಸಗಿದ ಮನೆಮಾಲೀಕರ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು. ಸಂತ್ರಸ್ತ ಹುಡುಗಿಯನ್ನು ತಕ್ಷಣವೇ ಆ ಮನೆಯಿಂದ ರಕ್ಷಿಸಿ, ಸೂಕ್ತ ವೈದ್ಯಕೀಯ ನೆರವು, ಕಾನೂನು ಸಹಾಯ ಹಾಗೂ ಮಾನಸಿಕ ಧೈರ್ಯ ತುಂಬುವ ಕೆಲಸವಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.


pic.twitter.com/nzPlNYLHLe

 

— Ravi Yadav (@RaviRaj13857831) August 9, 2026

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಜೊತೆ ಮಧ್ಯರಾತ್ರಿ ಚರ್ಚೆ: ಸಚಿವರಿಗೆ ಖಾತೆ ನೀಡಲು ಸಿಎಂ ಡಿಕೆ ಶಿವಕುಮಾರ್ ಅಲೆದಾಟ