Publish Date: Sat, 08 Aug 2026 (12:04 IST)
Updated Date: Sat, 08 Aug 2026 (12:10 IST)
ಹೆದ್ದಾರಿಗಳಲ್ಲಿ ಸಾಗುವ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಅಧಿಕಾರಿಗಳ ಹಾವಳಿಗೆ ಬೇಸತ್ತ ಲಾರಿ ಚಾಲಕನೊಬ್ಬ, ತೆಲಂಗಾಣದ ಗಡಿ ಚೆಕ್‌ಪೋಸ್ಟ್‌ನಲ್ಲಿ ದಿನಂಪ್ರತಿ ನಡೆಯುತ್ತಿದ್ದ ಲಂಚಾವತಾರವನ್ನು ತಡೆದು, ರಸ್ತೆ ತಡೆದು ಭಾರಿ ಪ್ರತಿಭಟನೆ ನಡೆಸಿದ ಧೈರ್ಯದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಪ್ರತಿ ಬಾರಿಯೂ ಅಧಿಕಾರಿಗಳು ಕೇಳುವ 200 ರೂಪಾಯಿ ಲಂಚ ನೀಡಲು ಸ್ಪಷ್ಟವಾಗಿ ನಿರಾಕರಿಸಿದ ಚಾಲಕ, ತನ್ನ ಭಾರಿ ಲಾರಿಯನ್ನು ಚೆಕ್‌ಪೋಸ್ಟ್ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ನಿಂತಿದ್ದನು.
ತೆಲಂಗಾಣದ ರಾಜ್ಯ ಗಡಿ ಚೆಕ್‌ಪೋಸ್ಟ್‌ನಲ್ಲಿ ನಿಯಮಬಾಹಿರವಾಗಿ ಲಾರಿ ಚಾಲಕರಿಂದ ಲಂಚ ವಸೂಲಿ ಮಾಡಲಾಗುತ್ತಿತ್ತು. ಪ್ರತಿ ಬಾರಿ ಬಂದಾಗಲೂ 200 ರೂಪಾಯಿ ಲಂಚ ನೀಡುವಂತೆ ಪೀಡಿಸುತ್ತಿದ್ದರಿಂದ ಕೆರಳಿದ ಚಾಲಕ, ಈ ಬಾರಿ ಕಾಸು ನೀಡಲು ಬದ್ಧನಾಗಿರದೆ ನೇರವಾಗಿ ಅಧಿಕಾರಿಗಳ ವಿರುದ್ಧವೇ ಹರಿಹಾಯ್ದಿದ್ದಾನೆ.
ಸಿವಿಲ್ ಉಡುಪಿನಲ್ಲಿದ್ದ ಕೆಲ ವ್ಯಕ್ತಿಗಳು ಚಾಲಕರಿಂದ ಲಂಚದ ಹಣ ಪಡೆಯುತ್ತಿರುವ ದೃಶ್ಯಗಳನ್ನು ಚಾಲಕ ಹಾಗೂ ಸ್ಥಳೀಯರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅಧಿಕಾರಿಗಳು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಈ ರೀತಿ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಉನ್ನತಾಧಿಕಾರಿಗಳು ಬಂದು ಸೂಕ್ತ ತನಿಖೆ ನಡೆಸುವವರೆಗೆ ನಾನು ವಾಹನವನ್ನು ಮುಂಭಾಗಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಲಾರಿಯನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ ಪರಿಣಾಮ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದಂತೆ ಸಾರ್ವಜನಿಕರು ಹಾಗೂ ನೆಟ್ಟಿಗರು ಚಾಲಕನ ಬೆಂಬಲಕ್ಕೆ ನಿಂತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ