Select Your Language

Notifications

webdunia
webdunia
webdunia
webdunia

ರೈಲು ಹತ್ತುವ ಭರದಲ್ಲಿ ಬೆಲೆ ಬಾಳುವ ಐಫೋನ್ ನ್ನೇ ಕಳೆದುಕೊಂಡ Video

iphone slipped to track
ಸೀತಾಮಢಿ (ಬಿಹಾರ): ರೈಲು ಹತ್ತುವ ತರಾತುರಿಯಲ್ಲಿ ಪ್ರಯಾಣಿಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ ಬಿಹಾರದ ಸೀತಾಮಢಿ ರೈಲು ನಿಲ್ದಾಣದಲ್ಲಿ ನಡೆದಿದ್ದು, ಚಲಿಸುವ ರೈಲನ್ನು ಹತ್ತಲು ಓಡಿದ ಪ್ರಯಾಣಿಕನೊಬ್ಬನ ಜೇಬಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಐಫೋನ್ ಜಾರಿ ಬಿದ್ದಿದೆ.
 
ರೈಲು ಹೊರಡುವ ಕೊನೆ ಕ್ಷಣದಲ್ಲಿ ಅವಸರದಿಂದ ಓಡಿಬಂದ ಪ್ರಯಾಣಿಕ, ಬೋಗಿಯ ಹ್ಯಾಂಡಲ್ ಹಿಡಿದು ಹತ್ತುವ ಯತ್ನದಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಸೀತಾಮಢಿ ರೈಲು ನಿಲ್ದಾಣಕ್ಕೆ ರೈಲು ಬಂದು ನಿರ್ಗಮಿಸುವ ಸಮಯದಲ್ಲಿ ಪ್ರಯಾಣಿಕ ತಡವಾಗಿ ತಲುಪಿದ್ದ. ರೈಲು ಈಗಾಗಲೇ ಚಲಿಸಲು ಪ್ರಾರಂಭಿಸಿದ್ದರಿಂದ ಗಾಬರಿಯಿಂದ ಓಡಿಬಂದು ಹತ್ತಲು ಯತ್ನಿಸಿದ್ದ.
 
ರೈಲಿನ ಬಾಗಿಲನ್ನು ಹಿಡಿದು ಮೇಲೆ ಹತ್ತುವ ರಭಸದಲ್ಲಿ, ಆತನ ಪ್ಯಾಂಟ್ ಜೇಬಿನಲ್ಲಿದ್ದ ಐಫೋನ್ ಜಾರಿ ನೇರವಾಗಿ ರೈಲ್ವೆ ಹಳಿಗಳ ಮಧ್ಯೆ ಬಿದ್ದಿದೆ. ಕಣ್ಣೆದುರೇ ದುಬಾರಿ ಐಫೋನ್ ಹಳಿಯ ಮೇಲೆ ಬೀಳುತ್ತಿರುವುದನ್ನು ಕಂಡ ಪ್ರಯಾಣಿಕ ಚೀರಾಡಿದ್ದಾನೆ. ಆದರೆ ರೈಲು ವೇಗ ಪಡೆದುಕೊಂಡಿದ್ದರಿಂದ ಆತನಿಗೆ ತಕ್ಷಣವೇ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಚಲಿಸುವ ರೈಲನ್ನು ಹತ್ತುವುದು ಅಥವಾ ಇಳಿಯುವುದು ಜೀವಕ್ಕೆ ಕುತ್ತು ತರುವ ಸಾಹಸ. ಈ ವೇಳೆ ಸಣ್ಣ ಎಡವಟ್ಟಾದರೂ ಬೆಲೆಬಾಳುವ ವಸ್ತುಗಳು ಮಾತ್ರವಲ್ಲ, ಪ್ರಾಣವೇ ಹೋಗುವ ಅಪಾಯವಿರುತ್ತದೆ. ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿದಾಗ ಯಾವುದೇ ಕಾರಣಕ್ಕೂ ಓಡಿಬಂದು ಹತ್ತುವ ಯತ್ನ ಮಾಡಬೇಡಿ.
pic.twitter.com/7Wf858wCj1

 

— indiainlast24hr (@indiain24hr) August 10, 2026

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಹೈಕಮಾಂಡನ್ನೂ ಬ್ಲ್ಯಾಕ್‍ಮೇಲ್ ಮಾಡಿದ ನಾಗೇಂದ್ರ: ವಿಜಯೇಂದ್ರ